Home ಜಿಲ್ಲೆ ಕಲಬುರಗಿ 1.73 ಲಕ್ಷ ರೂ.ಮೊತ್ತದ ಪಡಿತರ ಅಕ್ಕಿ ಜಪ್ತಿ

1.73 ಲಕ್ಷ ರೂ.ಮೊತ್ತದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಅ.17-ನಗರದ ಆಳಂದ ರಸ್ತೆಯ ಕೆರೆಭೋಸಗಾ ಹತ್ತಿರ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಮಹಾರಾಷ್ಟ್ರ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ತಹಶೀಲ್ ಕಚೇರಿಯ ಆಹಾರ ನಿರೀಕ್ಷಕ ನವೀನ್ ಎಂ, ಸಬ್-ಅರ್ಬನ್ ಪೊಲೀಸ್ ಠಾಣೆ ಎಎಸ್‍ಐ ನಾಗರಾಜ ಹಾಗೂ ಸಿಬ್ಬಂದಿ ದಾಳಿ ನಡೆಸಿ 1,73, 600 ರೂ. ಮೊತ್ತದ 4960 ಕೆ.ಜಿ. ಅಕ್ಕಿ ಮತ್ತು 4 ಲಕ್ಷ ರೂ.ಮೌಲ್ಯದ ವಾಹನ ಸೇರಿ 5,73,600 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಾಹನದ ಮಾಲಿಕ ಜಾಕೀರ್ ಶೇಖ್, ವಾಹನ ಚಾಲಕ ಅಶ್ಫಾಕ್ ಪಾಶಾ ಅವರ ವಿರುದ್ಧ ಸಬ್-ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1.80 ಲಕ್ಷ ರೂ.ಮೌಲ್ಯದ ಸಾಮಗ್ರಿ ಕಳವು
ಕಲಬುರಗಿ ತಾಲ್ಲೂಕಿನ ಫರಹತಾಬಾದ ಸೀಮಾಂತರದಲ್ಲರುವ ಬ್ಲೂಪಿನ್ ಸೋಲಾರ್ ಪ್ಲಾಂಟ್ ಕಂಪನಿಯಲ್ಲಿನ ವೈಯರ್ ಮತ್ತು ಇತರ ಸಾಮಗ್ರಿ ಸೇರಿ 1.80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಕಂಪನಿಯಲ್ಲಿ ಸೆಕ್ಯೂರಿಟಿ ಸೂಪರ್ ವೈಜರ್ ಆಗಿರುವ ಆನಂದ ನಡುವಿನಕೇರಿ ಈ ಬಗ್ಗೆ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.