Home ಜಿಲ್ಲೆ ಉಕ್ಕು ಸಚಿವಾಲಯ ಹಿಂದಿ ಸಲಹಾ ಸಮಿತಿಗೆ ರಮೇಶ ಪಾಟೀಲ ನೇಮಕ

ಉಕ್ಕು ಸಚಿವಾಲಯ ಹಿಂದಿ ಸಲಹಾ ಸಮಿತಿಗೆ ರಮೇಶ ಪಾಟೀಲ ನೇಮಕ

ಬೀದರ್:ಏ.೧೬: ಕೇಂದ್ರ ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯರಾಗಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಉಕ್ಕು ಖಾತೆ ರಾಜ್ಯ ಸಚಿವರು ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ರಮೇಶ ಪಾಟೀಲ ಸೋಲಪುರ ಅವರ ಅಧಿಕಾರ ಅವಧಿ ಮೂರು ವರ್ಷ ಆಗಿದೆ.
ಸಂವಿಧಾನದಲ್ಲಿನ ಅಧಿಕೃತ ಭಾಷೆಗೆ ಸಂಬAಧಿಸಿದ ವಿಷಯಗಳ ಅನುಷ್ಠಾನಕ್ಕೆ ಸಲಹೆ ನೀಡುವುದು, ಅಧಿಕೃತ ಭಾಷಾ ಕಾಯ್ದೆ ಮತ್ತು ನಿಯಮಗಳ ಅನುಸರಣೆ ಪರಿಶೀಲನೆ, ಹಿಂದಿ ಬಳಕೆಗೆ ಉತ್ತೇಜನ ನೀಡುವುದು ಮೊದಲಾದವು ಸಮಿತಿಯ ಕಾರ್ಯಗಳಾಗಿವೆ.
ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ರಮೇಶ ಪಾಟೀಲ ಅವರಿಗೆ ಇದೀಗ ಕೇಂದ್ರ ಸರ್ಕಾರದ ಸಚಿವಾಲಯದ ಸಮಿತಿಯ ಸದಸ್ಯ ಸ್ಥಾನ ಒಲಿದು ಬಂದಿದೆ.
ಪಾಟೀಲ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಶ್ರಮಿಸುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರ ಅತ್ಯಂತ ಸಮೀಪವರ್ತಿಯಾಗಿದ್ದಾರೆ.
ತಮ್ಮನ್ನು ಕೇಂದ್ರದ ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ,
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಎ???ಡಿಎ ಮೈತ್ರಿ ಪಕ್ಷಗಳ ರಾಷ್ಟ್ರೀಯ, ರಾಜ್ಯ ವರಿಷ್ಠರು, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರಿಗೆ ಕೃತಜ್ಞತೆ ತಿಳಿಸಿದ್ದಾರೆ.