Home ಜಿಲ್ಲೆ ಸೈದಾಪುರ ಡಿಡಿಯು ಶಾಲೆಯಲ್ಲಿ ನಾಳೆ ಸಾರ್ವಜನಿಕ ಅಕ್ಷರಾಭ್ಯಾಸ

ಸೈದಾಪುರ ಡಿಡಿಯು ಶಾಲೆಯಲ್ಲಿ ನಾಳೆ ಸಾರ್ವಜನಿಕ ಅಕ್ಷರಾಭ್ಯಾಸ

ಸೈದಾಪುರ:ಮೇ.೧೨: ಡಾ. ಭೀಮಣ್ಣ ಮೇಟಿ ಹಾಗೂ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ಡಿಡಿಯು ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ನಾಳೆ ಬುಧವಾರ (ಮೇ ೧೩) ಸಾರ್ವಜನಿಕ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೯:೩೦ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ೨ ರಿಂದ ೫ ವರ್ಷದೊಳಗಿನ ಮಕ್ಕಳಿಗೆ ಬೆಂಗಳೂರಿನ ಸೂರ್ಯವರ್ಧನ ಗುರೂಜಿ ನೇತೃತ್ವದಲ್ಲಿ ಅಕ್ಷರಾಭ್ಯಾಸ ನೆರವೇರಿಸಲಾಗುತ್ತದೆ ಎಂದು ಶಿಕ್ಷಣ ಸಂಸ್ಥೆಯ ದೇವೇಂದ್ರಪ್ಪ ಕೂಡಲೂರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಹಾಗೂ ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮವು ಮಕ್ಕಳ ಶಿಕ್ಷಣದ ಆರಂಭಕ್ಕೆ ಶುಭ ಸಂಕೇತವಾಗಿದ್ದು, ಪೋಷಕರಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.