
ಯಾದಗಿರಿ:ಮೇ.೭: ಜಿಲ್ಲೆಯ ವಡಗೇರಾ ತಾಲೂಕಿನ ಯಾದಗಿರಿ ಮತಕ್ಷೇತ್ರಕ್ಕೆ ವ್ಯಾಪ್ತಿಗೆ ಬರುವ ಹೊರಟುರ ಗ್ರಾಮದ ಪ್ರಮುಖರು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ತಕ್ಷಣ ಉಮೇಶ ಮುದ್ನಾಳ ಅವರು ಹೊರುಟುರ ಗ್ರಾಮದ ಪೀರಸಾಬ ದರ್ಗಾ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೇ ಬೇಟಿ ನೀಡಿ ಎಲ್ಲಾ ಕಡೆ ಕಾಲ್ನಡಿಗೆಯಿಂದ ಸಂಚಾರ ಮಾಡಿ ಪರಿಶಿಲಿಸಿದ ನಂತರ ಮಾತನಾಡಿ ಅವರು ಪೀರಸಾಬ ದರ್ಗಾದಲ್ಲಿ ಪ್ರತಿ ವರ್ಷ ಜಾತ್ರೆ ಮಹೋತ್ಸವ ನಡೆಯುತ್ತಿದ್ದು ಈ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದ್ದು ಅವರಿಗೆ ಮತ್ತು ದರ್ಗಾಕ್ಕೆ ಮೂಲ್ಯ ಸೌಯರ್ಕಗಳಾದ ಕುಡಿಯುವನೀರು, ವಿದ್ಯುತ್ತ, ಸಿಸಿ ರಸ್ತೆ, ಇವು ಪ್ರಮುಖ ಬೇಡಿಕೆಯಾಗಿದ್ದು ಇವುಗಳನ್ನು ಸಂಬAಧಪಟ್ಟ ಅಧಿಕಾರಿಗಳ ಗಮಕ್ಕೆ ತಂದು ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು.
.
ಹೊರಟೂರ ಗ್ರಾಮಕ್ಕೆ ಜಿಲ್ಲಾಡಳಿತ ಪೀರಸಾಬ ದರ್ಗಾ ಮತ್ತು ಸರಕಾರಿ ಶಾಲೆಗೆ ಕುಡಿಯುವ ನೀರು ವಿದ್ಯುತ್ತ, ರಸ್ತೆ ಸಮಸ್ಯೆ ಶೀಘ್ರದಲ್ಲೇ ಇತ್ಯಾರ್ಥ ಪಡಿಸದ್ದಿದರೆ ಶಾಲಾ ಮಕ್ಕಳು ಮತ್ತು ಪೋಷಕರು ಸೇರಿ ಯಾದಗಿರಿ ಯಿಂದ ವಡಗೇರಾ ಹೋಗುವ ಹಾಲಗೇರಾ ಗ್ರಾಮದ ವಿಠ್ಠಲ್ ಹೇರೂರುಅವರ ಸರ್ಕಲ್‌ನಲ್ಲಿ ರಸ್ತೆ ತಡೆ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದುದೆಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಬದಲ್ಲಿ ಭೀಮಶಂಕರ, ಮಲ್ಲೇಶಿ, ನಂದಪ್ಪ, ಯಲ್ಲಪ್ಪ, ಬಸವರಾಜ, ಶರಣಪ್ಪ, ಅಬ್ದುಲ್ ಬಾಷಾ, ಮೈನೂದ್ಧಿನ್, ಮಲ್ಲಣ್ಣಗೌಡ, ಮರಿಲಿಂಗಪ್ಪ, ಮಲ್ಲಪ್ಪಗೌಡ ಪೋಲಿಸ್ ಪಾಟೀಲ್, ನರಸಪ್ಪ, ವೆಂಕಟೇಶ, ಶಿವಲಿಂಗಪ್ಪ, ದೊಡ್ಡ ಮಾಳಪ್ಪ, ಬೀರಪ್ಪ ಪೂಜಾರಿ, ಹಣಮಂತ ಬಾಗ್ಲಿ ಶಿವಬಸಪ್ಪ ಸಿದ್ದಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.
ಸ್ವತಂತ್ರö ಸಿಕ್ಕು ೭೫ ವರ್ಷ ಗತಿಸಿದರು ಸರಕಾರಿ ಶಾಲೆ ದೇವಸ್ಥಾನ ದರ್ಗಾಗಳಿಗೆ ಮೂಲ ಸೌಕರ್ಯ ಸಿಗದಿರುವುದು ದೂರ ದೃಷ್ಟಕರು ಸಂಗತಿ. ಶಾಲೆ ದೇವಸ್ಥಾನ ದರ್ಗಾಗಳಿಗೆ ಸಾರ್ವಜನಿಕರ ಸಾಮರಷ್ಯ ಕಾಣುವು ಸ್ಥಳಗಳಾಗಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್

























