Home ಜಿಲ್ಲೆ ಸಾರ್ವಜನಿಕರಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಚನೆಎರಡು ಮಾಹೆಯ ಪಡಿತರ ಆಹಾರ ಧಾನ್ಯ ವಿತರಣೆಗೆ ಕ್ರಮ:ಜಿಲ್ಲಾಧಿಕಾರಿ...

ಸಾರ್ವಜನಿಕರಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಚನೆಎರಡು ಮಾಹೆಯ ಪಡಿತರ ಆಹಾರ ಧಾನ್ಯ ವಿತರಣೆಗೆ ಕ್ರಮ:ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಯಾದಗಿರಿ: ಮೇ.೭:ಗ್ಯಾಸ್ ಏಜೇನ್ಸಿಯವರು ಸಾರ್ವಜನಿಕರಿಗೆ ಸರಿಯಾಗಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ನನ್ನು ಸರಿಯಾಗಿ
ಸರಬರಾಜು ಮಾಡಲು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು
ಸೂಚಿಸಿದರು .

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ಯಾಸ್ ಏಜೆನ್ಸಿದಾರರೊಂದಿಗೆ ಸಭೆ
ನಡೆಸಿದ ಅವರು, ಅನಧಿಕೃತವಾಗಿ ಮಾರಾಟ , ದರ ಹೆಚ್ಚಳ ಮಾಡಿ ಗ್ಯಾಸ್ ಸಿಲಿಂಡರ್
ಮಾರಾಟ ಮಾಡಿದರೆ ಅಗತ್ಯ ವಸ್ತುಗಳ ಕಾಯಿದೆ ೧೯೫೫ ಮತ್ತು ಪೆಟ್ರೊಲಿಯಂ ವಸ್ತುಗಳ ಸಂಗ್ರಹ, ಬಳಕೆ ಕಾಯಿದೆ ೧೯೯೯ ಅಡಿ ಕರ್ಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು ,

ಆಹಾರ ಇಲಾಖೆ ಉಪನಿರ್ದೇಶಕರಾದ ಸೋಮಶೇಖರ ಬಿರಾದಾರ , ಎಲ್ಲಾ ೧೮ ಏಜೇನ್ಸಿಯವರು ಆಹಾರ ಇಲಾಖೆ ತಾಲೂಕಾ ಮಟ್ಟದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಎರಡು ಮಾಹೆಗಳ ಆಹಾರ ಧಾನ್ಯ ವಿತರಣೆಗೆ ಕ್ರಮ ಪಡಿತರ ಚೀಟಿದಾರರ ಗಮನಕ್ಕೆ

ಕೇಂದ್ರ ಸರ್ಕಾರವು ದೇಶದಲ್ಲಿ ಮುಂಬರುವ ಖರೀದಿ ಋತುವಿನ ಹಿನ್ನಲೆಯಲ್ಲಿ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಮತ್ತು ಸಂಗ್ರಹಣೆಗಾಗಿ ರಾಜ್ಯಗಳು ಎದುರಿಸುತ್ತಿರುವ ಅಡಚಣೆಗಳಿಂದಾಗಿ ಎನ್‌ಎಫ್‌ಎಸ್ ಅಡಿಯಲ್ಲಿ ಮೇ ಮತ್ತು ಜೂನ್-೨೦೨೬ ರ ಎರಡು ಮಾಹೆಗಳ ವರೆಗಿನ ಆಹಾರಧಾನ್ಯ ಹಂಚಿಕೆಯನ್ನು ಮುಂಗಡವಾಗಿ ಎತ್ತುವಳಿ ಮಾಡಿ ಕೂಡಲೇ ವಿತರಣೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಿಲಾಗಿರುತ್ತದೆ.

ಪ್ರಯುಕ್ತ ಮೇ-೨೦೨೬ ಮತ್ತು ಜೂನ್-೨೦೨೬ ರ ಎರಡು ಮಾಹೆಗಳ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಹಂಚಿಕೆಯನ್ನು ಮೇ-೨೦೨೬ರ ಮಾಹೆಯಲ್ಲಿ ವಿತರಿಸಲು ಸರ್ಕಾರವು ನಿರ್ದೇಶನ ನೀಡಿದೆ.

ಪ್ರಯುಕ್ತ ಯಾದಗಿರಿ ಜಿಲ್ಲೆಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ ೭೦ ಕೆ.ಜಿ (ಮೇ-೩೫ + ಜೂನ್ -೩೫) ಅಕ್ಕಿ ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ ೧೦ ಕೆ.ಜಿ (ಮೇ- ೫ + ಜೂನ್-೫) ಉಚಿತವಾಗಿ ವಿತರಿಸಲಾಗುತ್ತದೆ.

ಮೇ ಮತ್ತು ಜೂನ್ ೨೦೨೬ ರ ಎರಡು ಮಾಹೆಗಳ ಆಹಾರಧಾನ್ಯವನ್ನು ಒಟ್ಟಿಗೆ ವಿತರಣೆ ಮಾಡಬೇಕಾಗಿರುವುದರಿಂದ ವಿತರಣಾ ಸಂದರ್ಭದಲ್ಲಿ ಪ್ರತಿ ಮಾಹೆಯ ವಿತರಣೆಗೆ ಫಲಾನುಭವಿಗಳಿಂದ ಪ್ರತ್ಯೇಕ ಬಯೋ ಮೆಟ್ರಿಕ್ ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ.

ಆದ್ದರಿಂದ ಪಡಿತರ ಚೀಟಿ ಫಲಾನುಭವಿಗಳು ಎರಡು ಬಾರಿ ಬಯೋ ಮೇಟ್ರಿಕ್ ನೀಡಿ ಆಹಾರಧಾನ್ಯವನ್ನು ಪಡೆಯಲು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ತಿಳಿಯಪಡಿಸಿದೆ.

ಮುಂದುವರೆದು ರಾಜ್ಯ ಸರ್ಕಾರದ ಮಹತ್ವ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದ ವತಿಯಿಂದ ವಿತರಿಸಲಾಗುತ್ತಿರುವ ಹೆಚ್ಚುವರಿ ೦೫ ಕೆ.ಜಿ ಆಹಾರಧಾನ್ಯವನ್ನು ಮೇ ಮತ್ತು ಜೂನ್-೨೦೨೬ ರ ಮಾಹೆಗಳ ಆಹಾರಧಾನ್ಯವನ್ನು ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಫಲಾನುಭವಿಗಳಿಗೆ ಈಗಾಗಲೇ ವಿತರಿಸುವ ರೀತಿಯಲ್ಲಿ ಜೂನ್-೨೦೨೬ ರ ಮಾಹೆಯಲ್ಲಿ ಎತ್ತುವಳಿ ಮಾಡಿ ವಿತರಿಸಲು ಸರ್ಕಾರವು
ನಿರ್ದೇಶಿಸಿದೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಅಂತರ್ ರಾಜ್ಯ ಅಂತ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ಸಹಾಯವಾಣಿ ಸಂಖ್ಯೆ ೧೯೬೭ಗೆ ಹಾಗೂ ತಾಲ್ಲೂಕಿನಲ್ಲಿರುವ ತಹಶೀಲ್ದಾರರ ಕಛೇರಿಗೆ ಅಥವಾ ಜಿಲ್ಲೆಯ ಉಪ ನಿದೇರ್ಶಕರ ಕಛೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.

ಸದರಿ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬAದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಸದರಿ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ