
ಕಲಬುರಗಿ,ಮೇ.11-ನಗರ ಮತ್ತು ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂದೆ ಇಂದು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಠೋಡ್, ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ್, ಪದ್ಮಾವತಿ ಪಾಟೀಲ, ಸಾಜೀದ್ ಅಹಮದ್, ಶಿವಲಿಂಗಮ್ಮ ಲೇಂಗಟಿಕರ್, ಜಗದೇವಿ ಕುಂಬಾರ, ಉಷಾ ಭಜಂತ್ರಿ, ವಿಜಯಲಕ್ಷ್ಮೀ ಬೆಣ್ಣೂರ, ಅಷ್ಮಿತಾ ರಾಠೋಡ್, ಅರುಣಾ, ಪ್ರಭಾವತಿ ಆಲಮೇಲ್, ಕೋಕಿಲಾ, ಜ್ಯೋತಿ ಶಕಾಪೂರ, ಸುಷ್ಮಿತಾ ಸಜ್ಜನ್, ಪೂನಂ ಠಾಕೂರ, ದಾನೇಶ್ವರಿ ಮಠ, ಸುಜಾತಾ ಪಾಟೀಲ, ಶಾಲಿನಿ ಅನೀಲಕುಮಾರ, ಜಗದೇವಿ ಹೆಗ್ಡೆ, ಶ್ರೀದೇವಿ ನೆಲೋಗಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.























