Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿದ ಕೋಲಿ ಸಮಾಜದ ಮುಖಂಡರಿಂದ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿದ ಕೋಲಿ ಸಮಾಜದ ಮುಖಂಡರಿಂದ ಪ್ರತಿಭಟನೆ

ಚಿತ್ತಾಪುರ:ಮಾ.6:ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲರೋಜ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮುತ್ತಾ ಅವರ ವಿರುದ್ಧ ದಾಖಲಾದ ಸುಳ್ಳು ಪೆÇೀಕೋ ಪ್ರಕರಣ ಹಿಂದಕ್ಕೆ ಪಡೆದು ರದ್ದು ಪಡಿಸಬೇಕು, ಸುಳ್ಳು ಪ್ರಕರಣ ದಾಖಲಿಸಿದ,ಮತ್ತು ಅದಕ್ಕೆ ಪೆÇ್ರೀತ್ಸಾಹಿಸಿರುವ ಅಧಿಕಾರಿಗಳ, ಬಾಲಕಿಯ ಮತ್ತು ಬಾಲಕಿಯ ಕುಟುಂಬದ ಮಾನ ಹರಾಜು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲಿಸಿದರು.

ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಕೋಲಿ ಸಮಾಜದ ಗ್ರಾಮ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಹಲಕರ್ಟಿ ಮುನಿಂದ್ರ ಶಿವಾಚಾರ್ಯರು,ಗ್ರಾಮ ಘಟಕದ ಅಧ್ಯಕ್ಷ ದೊಡ್ಡಪ್ಪ ಕಟ್ಟಿಮನಿ, ಉಪಾಧ್ಯಕ್ಷ ನಿಂಗಪ್ಪ ನೆಲೋಗಿ, ಕಾರ್ಯದರ್ಶಿ ಭೀಮಣ್ಣ ಕೋಲಕುಂದಿ, ಚಿತ್ತಾಪುರ ತಾಲೂಕ ಉಪಾಧ್ಯಕ್ಷ ಭಾಗಣ್ಣ ಹೊನಗುಂಟಿ,ತಾಲೂಕ ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್,ರಾಮಲಿಂಗ ಬಾನರ್,ಹಣಮಂತ ಸಂಕನೂರ್,ದೇವಿಂದ್ರ ಅಣಕಲ್,ರಾಘವೆಂದ್ರ ಹಲಕರ್ಟಿ,ಸಿದ್ದು ಹಲಕರ್ಟಿ,ಭೀಮು ಹಲಕರ್ಟಿ ಮಾತನಾಡಿದರು.

ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಭಕ್ತಾದಿಗಳು,ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನೆಗೆ ಪೆÇಲೀಸ್ ಇಲಾಖೆಯಿಂದ ಬಿಗಿಬಂದೋಬಸ್ತ ವಹಿಸಿದರು.

ಸಾಲು ನಿಂತ ವಾಹನಗಳು

ಸುಮಾರು ಒಂದು ಗಟೆಗೂ ಹೆಚ್ಚು ಸಮಯ ನಡೆಸಿದ ಪ್ರತಿಭಟನೆಯಿಂದಾಗಿ ಎರಡು ಬದಿಯಲ್ಲಿ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದವು,ಪ್ರತಿಭಟನೆ ಮುಗಿದ ನಂತರ ಪೆÇಲೀಸ್ ಇಲಾಖೆಯ ಅಧಾಕಿರಿಗಳು ಮತ್ತು ನಿಬ್ಬಂಧಿಗಳು ವಾಹನ ದಟ್ಟನೆಯನ್ನು ಸರಾಗ ಗೊಳಿಸಿದರು.


ಮಲ್ಲಿಕಾರ್ಜುನ ಮುತ್ಯಾ ಅವರ ಮೇಲಿನ ಸುಳ್ಳು ಪ್ರಕರಣವನ್ನು ರದ್ದುಗೊಳಿಸಬೇಕು ಮತ್ತು ಅವರ ಮೇಲೆ ಸುಳ್ಳು ಕೇಸು ದಾಖಲಿಸಲು ಸಹಕರಿಸಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಂಬರುವ ದಿನೃಳಲ್ಲಿ ಯಾದಗಿರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಮಲ್ಲಿಕಾರ್ಜುನ ಅಲ್ಲೂರಕರ್ ಚಿತ್ತಾಪುರ ಯುವ ಕೋಲಿ ಸಮಾಜದ ತಾಲೂಕ ಅಧ್ಯಕ್ಷ.