Home ಜಿಲ್ಲೆ ಭಂಟನೂರ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ

ಭಂಟನೂರ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ

ತಾಳಿಕೋಟೆ:ಮೇ.8: ತಾಲೂಕಿನ ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈಧ್ಯಸಿಬ್ಬಂದಿಗಳನ್ನು ನಿಯೋಜಿಸಿದ್ದರೂ ಕೂಡಾ ಯಾರೂ ಒಬ್ಬರು ಬರುತ್ತಿಲ್ಲಾ ಭಂಟನೂರ ಗ್ರಾಮ ಒಳಗೊಂಡು ಹತ್ತಾರು ಗ್ರಾಮಗಳ ಬಡಜನಿರಿಗೆ ತೊಂದರೆಯಾಗುತ್ತಿದೆ ಎಂದು ಭಂಟನೂರ ಗ್ರಾಮದ ಜನರು ಗುರುವಾರರಂದು ಆರೋಗ್ಯ ಕೇಂದ್ರಕ್ಕೆ ಬೀಗ ಜಡೆದು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಗ್ರಾಮದ ಮುಖಂಡ ಸಿವರೆಡ್ಡಿ ಐನಾಪೂರ ಅವರು ಮಾತನಾಡಿ ಸರ್ಕಾರದ ಸುಪರ್ದಿಯಲ್ಲಿದ್ದ ಈ ಭಂಟನೂರ ಆರೋಗ್ಯ ಕೇಂದ್ರವನ್ನು ಎನ್‍ಜಿಓ ಮೂಲಕ ನಡೆಸಲಾಗುತ್ತಿಲ್ಲಾ ಸುಮಾರು 5, 6 ವರ್ಷಗಳ ಕಾಲ ವೈಧ್ಯ ಸಿಬ್ಬಂದಿಗಳು ನಿಗಧಿತ ಸಮಯವಿಲ್ಲದೇ ಮನಸ್ಸಿಚ್ಚೆಯಂತೆ ಬಂದು ಹೋಗುತ್ತಿದ್ದರು ಆದರೆ ಮಾರ್ಚ ಅಂತ್ಯಕ್ಕೆ ಎನ್‍ಜಿಓ ಅವಧಿ ಮುಗಿದಿದ್ದರಿಂದ ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆದೇಶದಂತೆ ತಾಲೂಕಾ ಆರೋಗ್ಯ ಅಧಿಕಾರಿಗಳು ಏಪ್ರೀಲ್ 27ರಂದೇ 5 ಜನ ವೈಧ್ಯಸಿಬ್ಬಂದಿಗಳನ್ನು ನೆಮಿಸಿ ಆದೇಶಿಸಿದ್ದಾರೆ ಆದರೆ ಇಲ್ಲಿಯವರೆಗೆ ಒಬ್ಬ ವೈಧ್ಯರು ಸಿಬ್ಬಂದಿಗಳು ಬಂದಿಲ್ಲಾ ಇದರಿಂದ ಇಲ್ಲಿಯ ಜನರಿಗೆ ತುಂಬಾ ತೊಂದರೆಯಾಗುವದರ ಜೊತೆಗೆ ಸುಮಾರು 15 ಕೀಲೋ ಮೀಟರ್ ಅಂತರದ ತಾಳಿಕೋಟೆ ಪಟ್ಟಣಕ್ಕೆ ಹೋಗಿಬರುವಂತಹ ದುಸ್ಥಿತಿ ಬಂದಿದೆ ಆರೋಪಿಸಿದರು.
ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ ಇಡೀ ತಾಲೂಕಿನಲ್ಲಿಯೇ ಮಾದರಿಯ ಆರೋಗ್ಯ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಆದರೆ ಸದ್ಯ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವು ಬೀಕಾರಿ ಆರೋಗ್ಯ ಕೇಂದ್ರವೆಂಬಂತಾಗಿದೆ ಜನರಿಗೆ ಚಿಕೀತ್ಸೆ ನೀಡಬೇಕಾದ ಆರೋಗ್ಯ ಕೇಂದ್ರವೇ ಚಿಕೀತ್ಸೆಗೆ ಬಂದಂತಾಗಿದೆ ಆರೋಗ್ಯ ಕೇಂದ್ರವು ದನದ ಕೊಂಡಡಿಯಂತಾಗಿದೆ ಆರೋಗ್ಯ ಕೇಂದ್ರದಲ್ಲಿ ಕಸ ತುಂಬಿಕೊಂಡಿದೆ ಬೇಡ್ ಮೇಲೆ ಸಲೈನ್ ಬಾಟಲಿ, ಔಷದಗಳು, ಹಾಗೆ ಬಿದ್ದಿವೆ ಜನರಿಗೆ ಸೂಕ್ತ ಚಿಕೀತ್ಸೆ ನೀಡಬೇಕಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಗತಿ ಬಂದಿದ್ದರೂ ಸಂಬಂದಿಸಿದ ಅಧಿಕಾರಿಗಳು ಕ್ರಮ ವಹಿಸದಿರುವದು ಒಳಗುಟ್ಟೇನೆಂಬುದು ತಿಳಿಯದಂತಾಗಿದೆ ಎಂದು ಶಿವರೆಡ್ಡಿ ಐನಾಪೂರ ಅವರು ಆರೋಪಿಸಿದರು.

ಈ ಸಮಯದಲ್ಲಿ ಗ್ರಾಮದ ಮುಖಂಡರುಗಳಾದ ರಾಮನಗೌಡ ಐನಾಪೂರ, ಡಾ.ಭಲವಂತ್ರಾಯ ನಡಹಳ್ಳಿ, ಸಾಹೇಬಗೌಡ ಸಾಸನೂರ, ಶಿವರೆಡ್ಡಿ ಐನಾಪೂರ, ಬಸವರಾಜ ತಳವಾರ, ಪ್ರಭುಗೌಡ ನಡಹಳ್ಳಿ, ಶಿವನಗೌಡ ಸಾಸನೂರ, ಶೇಂಕ್ರೆಪ್ಪ ಈಳಗೇರ, ಶ್ರೀಶೈಲ ಹಡಪದ, ಹಾಗೂ ಮಹಿಳೆಯರಾದ ಶ್ರೀಮತಿ ಲಕ್ಷ್ಮೀಂಬಾಯಿ ಬಳಬಟ್ಟಿ, ಶಾಂತಮ್ಮ ಸೂಡಗಿ, ಲಕ್ಷ್ಮೀಬಾಯಿ ಬಸರೆಡ್ಡಿ, ಗಂಗಮ್ಮ ಸಾಸನೂರ, ಗಂಗಮ್ಮ ಐನಾಪೂರ, ಬೋರಮ್ಮ ಬಿಂಜಲಭಾವಿ, ಮಹಾದೇವಿ ಭಜಂತ್ರಿ, ಕನಕಮ್ಮ ಯಾಳಗಿ, ಒಳಗೊಂಡು ನೂರಾರು ಜನರು ಇದ್ದರು.

ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಬಡವರಿಗೆ ಸಂಜೀವಿನಿಯಂತಿತ್ತು ಆದರೆ ಈಗ ವೈಧ್ಯರು ಇಲ್ಲಾ ಸಿಬ್ಬಂದಿಗಳು ಇಲ್ಲಾ ದನಕಟ್ಟುವ ಕೊಂಡಡಿಯಂತಾಗಿದೆ ಬಿಸಿಲಿನ ತಾಪಕ್ಕೆ ಜ್ವರ, ನೆಗಡಿ ಇನ್ನಿತರ ಸಣ್ಣಪುಟ್ಟ ಕಾಯಿಲೆ ತೋರಿಸಬೇಕೆಂದರೂ ತಾಳಿಕೋಟೆಗೆ ಹೋಗುವಂತಾಗಿದೆ ಕೂಡಲೇ ಹಿರಿಯ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಸರಿಪಡಿಸಬೇಕು.

ಡಾ.ಭಲವಂತ್ರಾಯ ನಡಹಳ್ಳಿ ಗ್ರಾಮದ ಮುಖಂಡರು.

ಏಪ್ರೀಲ್ 27 ರಂದು ಭಂಟನೂರ ಆರೋಗ್ಯ ಕೇಂದ್ರಕ್ಕೆ ವೈಧ್ಯರನ್ನಾಗಿ ಡಾ.ಸುನೀಲ್ ಹಿರೇಗೌಡರ, ಹೆಚ್‍ಆಯ್‍ಓ ಆಗಿ ಸತೀಶ ಕುಲಕರ್ಣಿ, ಫಾರ್ಮಸಿ ಅಧಿಕಾರಿಯಾಗಿ ಇಸಾಕ ಚೌದ್ರಿ, ಸಿಹೆಚ್‍ಓ ಆಗಿ ಅಕ್ಷತಾ ವಂದಲಿ, ವಿನಾಯಕ ಮಡಿವಾಳರ ಅವರನ್ನು ತಾಲೂಕಾ ಆರೋಗ್ಯ ಅಧಿಕಾರಿಗಳು ನೇಮಿಸಿ ವಾರದ 3 ದಿನಗಳ ಕಾಲ ಭಂಟನೂರ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡಲು ಆದೇಶಿಸಿದ್ದಾರಲ್ಲದೇ ಸದರಿ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಅಧಿಕಾರಿಗಳು ಸಲ್ಲಿಸಿದ್ದಾರೆ.