Home ಮುಖಪುಟ ಸುದ್ದಿ ಪಿಆರ್‌ಸಿ ವಿತರಣೆ ತಪ್ಪಿಲ್ಲ: ಬಿಜೆಪಿಗೆ ಡಿಸಿಎಂ ತಿರುಗೇಟು

ಪಿಆರ್‌ಸಿ ವಿತರಣೆ ತಪ್ಪಿಲ್ಲ: ಬಿಜೆಪಿಗೆ ಡಿಸಿಎಂ ತಿರುಗೇಟು

ಬೆಂಗಳೂರು.ಜು೨೧: ಮೊದಲು ತಹಸಿಲ್ದಾರ್ ಮಟ್ಟದಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿತ್ತು. ಈಗ ನಾವೇನಾದರೂ ಹೊಸ ವ್ಯವಸ್ಥೆ ಮಾಡಿದ್ದೇವಾ? ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಜಾತಿ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳನ್ನು ಕೇಳಲಾಗಿದೆ. ಹೀಗಾಗಿ ಸರ್ಕಾರದಿಂದ ಅದನ್ನು ಅಧಿಕೃತವಾಗಿ ನೀಡಲಾಗುತ್ತಿದೆ. ಇದರಲ್ಲಿ ತಪ್ಪೇನೂ ಕಾಣಿಸುತ್ತಿಲ್ಲ ಎಂದು ವಿಪಕ್ಷಗಳಿಗೆ ಗೃಹ ಸಚಿವ ಪರಮೇಶ್ವರ್ ಚಾಟಿ ಬೀಸಿದರು.

“ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಒಟ್ಟು ೧೩ ರೀತಿಯ ದಾಖಲೆಗಳನ್ನು ಕೇಳಲಾಗಿದೆ. ಆದರೆ ಎಲ್ಲ ಜನರ ಬಳಿ ಈ ಎಲ್ಲಾ ದಾಖಲೆಗಳು ಇರುವುದಿಲ್ಲ. ಅಂತಹ ಜನರಿಗೆ ನೆರವಾಗಲು ಸರ್ಕಾರದಿಂದ ಪಿಆರ್‌ಸಿ ವಿತರಿಸಲಾಗುತ್ತಿದೆ,” ಎಂದು ಸ್ಪಷ್ಟಪಡಿಸಿದರು.
“ಅನ್ಯ ರಾಜ್ಯದವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪ ಆಧಾರರಹಿತ. ಬೆಂಗಳೂರಿನಲ್ಲಿ ಕನಿಷ್ಠ ೧೦ ವರ್ಷಗಳಿಂದ ವಾಸವಿರುವವರಿಗೆ ಮಾತ್ರ ಈ ದಾಖಲೆಗಳನ್ನು ನೀಡಲಾಗುತ್ತಿದೆ. ನಾವು ಕೇಂದ್ರ ಸರ್ಕಾರದ ಯಾವುದೇ ಮಾನದಂಡಗಳನ್ನು ಉಲ್ಲಂಘಿಸುತ್ತಿಲ್ಲ. ಗೃಹ ಸಚಿವನಾಗಿ ಈ ಹಿಂದೆ ಕೂಡ ಸದನದಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ್ದೇನೆ,” ಎಂದರು.

ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ತಕ್ಷಣ ಪ್ರಕ್ರಿಯೆ’ರಾಜ್ಯ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. “ಇಂದು ಹೈಕಮಾಂಡ್ ನಾಯಕರು ಚರ್ಚೆ ನಡೆಸಿ ಒಪ್ಪಿಗೆ ನೀಡಿದರೆ, ತಕ್ಷಣವೇ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ. ಹೆಸರುಗಳು ಅಂತಿಮಗೊಂಡ ನಂತರ ರಾಜ್ಯಪಾಲರ ಸಮಯ ಪಡೆದು ಪ್ರಮಾಣ ವಚನಕ್ಕೆ ದಿನಾಂಕ ನಿಗದಿಯಾಗಲಿದೆ. ಈ ಬಾರಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಚರ್ಚೆಯಿದ್ದು, ಅದನ್ನು ಪರಿಗಣಿಸುವ ಸಾಧ್ಯತೆಯಿದೆ.”

“೨೦೨೮ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಸ್ತರಣೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ, ನಮ್ಮನ್ನು ಆ ಸಭೆಗೆ ಕರೆದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ಕೆಲವು ಸೂತ್ರಗಳನ್ನು ಅನ್ವಯಿಸಲಾಗಿತ್ತು. ಈಗ ನಾಯಕರು ಯಾವ ಮಾನದಂಡ ಇಟ್ಟುಕೊಂಡು ತೀರ್ಮಾನಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ,” ಎಂದರು.

ಬರ ನಿರ್ವಹಣೆ ಸ್ಪಷ್ಟನೆರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಪರಿಹಾರ ನಿಧಿ ಕುರಿತು ಮಾತನಾಡಿದ ಡಿಸಿಎಂ, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹಾಕಿದರು.

ಬಿಡುಗಡೆಯಾದ ಲಭ್ಯವಿರುವ ಅನುದಾನ
ಜಿಲ್ಲಾಧಿಕಾರಿಗಳ (ಆಅ) ಖಾತೆಗಳಲ್ಲಿ ೩೨೯ ಕೋಟಿ ಲಭ್ಯ,ಕುಡಿಯುವ ನೀರಿನ ತುರ್ತು ವ್ಯವಸ್ಥೆ ೫ ಕೋಟಿ ಬಿಡುಗಡೆ,ಪ್ರತಿ ತಾಲೂಕಿಗೆ ಬರ ಪರಿಹಾರ ಕಾರ್ಯ ೧ ಕೋಟಿ (ಸಿಎಂ ಘೋಷಣೆ),”ರಾಜ್ಯದ ಎಲ್ಲಾ ತಾಲೂಕುಗಳ ಜಿಲ್ಲಾಧಿಕಾರಿಗಳಿಂದ ಬರ ಪರಿಸ್ಥಿತಿಯ ಸಮಗ್ರ ವರದಿ ಕೇಳಿದ್ದೇವೆ. ವರದಿ ಬಂದ ತಕ್ಷಣ ಪೂರ್ಣ ಪ್ರಮಾಣದ ಚಿತ್ರಣ ಸಿಗಲಿದೆ. ಹಣವಿಲ್ಲದೆ ಇದೆಲ್ಲವನ್ನೂ ಮಾಡಲು ಸಾಧ್ಯವೇ ಕೇವಲ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.