Home ಜಿಲ್ಲೆ ಜನರೇ ಉತ್ತರ ನೀಡಿದ್ದಾರೆ

ಜನರೇ ಉತ್ತರ ನೀಡಿದ್ದಾರೆ

ಚನ್ನಮ್ಮನ ಕಿತ್ತೂರು, ಮೇ6: ಕಾಂಗ್ರೇಸ್‍ನ ದುರಾಡಳಿತ ಕಂಡು ಜನರೇ ಉತ್ತರ ನೀಡಿದ್ದಾರೆ. ಆಸ್ಸಾಂ, ಪಶ್ಚಿಮ ಬಂಗಾಳ, ಮತ್ತು ಪದುಚೇರಿಗಳಲ್ಲಿ ಮತದಾರರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಸ್ವಾಗತಿಸಿಕೊಂಡಿದ್ದು ಸಂತಸ ತಂದಿದೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಅಭಿಪ್ರಾಯಪಟ್ಟರು.


ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ದುರಾಡಳಿತಕ್ಕೆ ಮಮತಾ ಬ್ಯಾನರ್ಜಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಮತ್ತು ಅಭಿವೃದ್ದಿ ಕಾರ್ಯವೈಖರಿ ಮೆಚ್ಚಿ ಐತಿಹಾಸಿಕ ನಿರ್ಣಯ ಕೈಗೊಳ್ಳುವ ಮೂಲಕ ಬಿಜೆಪಿಗೆ ಅಭೂತ ಪೂರ್ವ ಜಯ ತಂದುಕೊಟ್ಟಿದ್ದಾರೆ ಎಂದರು.