
ವಿಜಯಪುರ,ಏ.16:ಇಪಿಎಸ್- 95 ರಾಷ್ಟ್ರೀಯ ಸಂಘರ್ಷ ಸಮಿತಿ ವತಿಯಿಂದ ಪಿಂಚಣಿದಾರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಪ್ರತಿಭಟನಾ ಮೆರವಣಿಗೆ ಮುಖಾಂತರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ಎನ್ ಎ ಸಿ ಕಾರ್ಯಾಧ್ಯಕ್ಷ ವೀರಕುಮಾರ ಗಡದ ಮಾತನಾಡಿ, ಸುಪ್ರೀಂ ಕೋರ್ಟ್‍ನ ನಿರ್ಧಾರ ಮತ್ತು ಸರಿಯಾದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು 1-9- 2014 ಕ್ಕಿಂತ ಮೊದಲು ಮತ್ತು ನಂತರ ನಿವೃತ್ತರಾದ ಇಪಿಎಸ್-95 ಪಿಂಚಣಿದಾರರಿಗೆ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಒದಗಿಸಲಾಗಿದೆ. ಇದರಿಂದ ಅವರಿಗೆ ನಿಜವಾದ ಅರ್ಥದಲ್ಲಿ ನ್ಯಾಯ ಸಿಗುತ್ತದೆ. ಎಲ್ಲಾ ಇಪಿಎಸ್-95 ಪಿಂಚಣಿದಾರರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಕಳೆದ 10 ವರ್ಷಗಳಿಂದ ಪಿಂಚಣಿದಾರರು ಹೋರಾಟದಲ್ಲಿ ತೊಡಗಿದ್ದಾರೆ. ದೇಶದ ಇಪಿಎಸ್-95 ಪಿಂಚಣಿದಾರರಿಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ, ಅವರಲ್ಲಿ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ. ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಯಶಸ್ವಿ ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಕ್ರಮದ ನಂತರ ಯಾವುದೇ ನಿರ್ದಿಷ್ಟ ನಿರ್ಧಾರಗಳ ಕೊರತೆಯಿಂದಾಗಿ ಪಿಂಚಣಿದಾರರು ಸಂಕಷ್ಟದಲ್ಲಿ ಇದ್ದಾರೆ ಎಂದರು.
ಮುಂಬರುವ ಕ್ಯಾಬಿನೆಟ್ ಸಭೆ ಅಥವಾ ಸಂಸತ್ತಿನ ಪ್ರಸ್ತುತ ಅಧಿವೇಶನದಲ್ಲಿ ನಮ್ಮ ನಾಲ್ಕು ಅಂಶಗಳ ಬೇಡಿಕೆಗಳಿಗೆ ತಕ್ಷಣದ ಅನುಮೋದನೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಜೆ. ಗೌಡರ, ರಫೀಕ್ ಪನಿಬಂದ, ಬಿ.ಆರ್. ರಜಪೂತ, ಗುಡ್ಡಪ್ಪ ತೊಂತನಾಳ, ಮಕಾನದಾರ ಭಾಯಿ ಸರ್ಕಾರ್, ಗುರು ಭಟ್, ಎಸ್.ಎಸ್. ಆಲಗುಂಡಿ, ಶ್ರೀಕಾಂgತ ಉಮರಾಣಿ, ರಾವಸಾಬ್ ಚಂದುಗಡೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

























