Home ಮುಖಪುಟ ಸುದ್ದಿ ೧೭ ರಾಜ್ಯಗಳಲ್ಲಿ ೬.೧೫ ಕೋಟಿಗೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಕ್ಕೆ

೧೭ ರಾಜ್ಯಗಳಲ್ಲಿ ೬.೧೫ ಕೋಟಿಗೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಕ್ಕೆ

ನವದೆಹಲಿ,ಸೆ.೧: ಕೇಂದ್ರ ಚುನಾವಣಾ ಆಯೋಗವು ವಿಶೇಷ ತೀವ್ರತರ ಪರಿಷ್ಕರಣೆ (ಎಸ್‌ಐಆರ್)ಯಂತೆ ಕರ್ನಾಟಕದಲ್ಲಿ ಕೋಟ್ಯಂತರ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿರುವ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ೧೭ ರಾಜ್ಯಗಳಲ್ಲಿ ೬.೧೫ ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಕೇಂದ್ರ ಚುನಾವಣಾ ಆಯೋಗವು ಕೈಗೊಂಡಿರುವ ‘ವಿಶೇಷ ತೀವ್ರತರ ಪರಿಷ್ಕರಣೆ’ (೩.೦) ಯೋಜನೆಯಡಿ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಕರ್ನಾಟಕ ಕೋಟ್ಯಾಂತರ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿರುವ ಬೆನ್ನಲ್ಲೆಕೇಂದ್ರಾಡಳಿತ ಸೇರಿದಂತೆ ದೇಶದ ೧೭ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು ೬.೧೫ ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ಈ ಪೈಕಿ ದೇಶದ ರಾಜಧಾನಿ ದೆಹಲಿಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಡಿಲೀಷನ್ ವರದಿಯಾಗಿದ್ದು, ಪ್ರತಿ ಮೂವರು ಮತದಾರರಲ್ಲಿ ಒಬ್ಬರ ಹೆಸರು ಕರಡು ಪಟ್ಟಿಯಿಂದ ಕೈಬಿಡಲ್ಪಟ್ಟಿದೆ. ಪ್ರಮುಖ ಮುಖ್ಯಾಂಶಗಳು ದೆಹಲಿಯಲ್ಲಿ ಶೇ. ೩೩ರಷ್ಟು ವೋಟರ್ಸ್ ಔಟ್: ದೆಹಲಿಯಲ್ಲಿದ್ದ ಒಟ್ಟು ೧.೪೫ ಕೋಟಿ ಮತದಾರರಲ್ಲಿ ಸುಮಾರು ೪೭.೫೬ ಲಕ್ಷ ಮತದಾರರ (ಶೇ. ೩೨.೮) ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಕರ್ನಾಟಕದಲ್ಲೂ ಭಾರಿ ಕಡಿತ:
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ನಂತರ ಪ್ರಕಟವಾದ ಕರಡು ಪಟ್ಟಿಯಲ್ಲಿ ೧.೦೮ ಕೋಟಿಗೂ ಹೆಚ್ಚು (ಸುಮಾರು ಶೇ. ೧೯.೫) ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಮತದಾರರು ಶಾಶ್ವತವಾಗಿ ವಾಸಸ್ಥಳ ಬದಲಾಯಿಸಿರುವುದು (ಮರಣ ಹೊಂದಿರುವುದು , ಸುದೀರ್ಘ ಅವಧಿಯಿಂದ ಗೈರುಹಾಜರಾಗಿರುವುದು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಆಯೋಗ ತಿಳಿಸಿದೆ.

ರಾಜ್ಯವಾರು ವರದಿ ವಿವರ:
ರಾಜ್ಯ / ಕೇಂದ್ರಾಡಳಿತ ಪ್ರದೇಶಕರಡು ಪಟ್ಟಿಯಿಂದ ತೆರವುಗೊಂಡ ಮತದಾರರ ಪ್ರಮಾಣ (%)ದೆಹಲಿ (ಓಅಖಿ)೩೨.೮೦% (ಅತ್ಯಂತ ಗರಿಷ್ಠ)ದಾದ್ರಾ ಮತ್ತು ನಾಗರ್ ಹವೇಲಿ & ದಮನ್-ದೀವ್೨೯.೬೦%ತೆಲಂಗಾಣ೨೧.೭೦%ಮಹಾರಾಷ್ಟ್ರ೨೧.೧೪%ಅಂಡಮಾನ್ ಮತ್ತು ನಿಕೋಬಾರ್೨೦.೬೦%ಕರ್ನಾಟಕ೧೯.೫೦%ದೆಹಲಿ ಹಾಗೂ ಬೆಂಗಳೂರಿನಲ್ಲಿ ನಗರ ಪ್ರದೇಶಗಳಿಗೇ ಹೆಚ್ಚು ಪೆಟ್ಟುಅಸ್ಥಿರ ವಲಸೆ ಜನಸಂಖ್ಯೆ ಹೆಚ್ಚಾಗಿರುವ ಮಹಾನಗರಗಳಲ್ಲಿ ಈ ಡಿಲೀಷನ್ ಪ್ರಮಾಣ ಬೃಹತ್ ಮಟ್ಟದಲ್ಲಿದೆ.

ದೆಹಲಿಯ ಆಗ್ನೇಯ ದೆಹಲಿ ಒಂದರಲ್ಲೇ ಶೇಕಡಾ ೪೩.೬೮ ರಷ್ಟು ಹೆಸರುಗಳನ್ನು ವರ್ಗೀಕರಿಸಲಾಗದೇ ಕಡಿತಗೊಳಿಸಲಾಗಿದೆ. ಇನ್ನೊಂದೆಡೆ, ಕರ್ನಾಟಕದಲ್ಲೂ ಬೆಂಗಳೂರಿನ ಬೊಮ್ಮನಹಳ್ಳಿ (ಶೇ. ೫೪.೮), ದಾಸರಹಳ್ಳಿ, ಬಿ.ಟಿ.ಎಂ ಲೇಔಟ್, ವಿಜಯನಗರ ಹಾಗೂ ಸಿ.ವಿ.ರಾಮನ್ ನಗರ ಸೇರಿ ೫ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಗಾಯಬ್ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮತದಾರರಿಗೆ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋದ ಅರ್ಹ ಮತದಾರರಿಗೆ ಮತ್ತೆ ಹೆಸರು ಸೇರ್ಪಡೆಗೊಳಿಸಲು ಚುನಾವಣಾ ಆಯೋಗವು ಕಾಲಾವಕಾಶ ನೀಡಿದೆ. ಸಲ್ಲಿಸುವ ಅವಧಿ: ಸೆಪ್ಟೆಂಬರ್ ೩೦ ರವರೆಗೆ. ಪ್ರಕ್ರಿಯೆ: ಮತಗಟ್ಟೆ ಮಟ್ಟದ ಅಧಿಕಾರಿಗಳು ಕ್ಷೇತ್ರ ಮಟ್ಟದ ಪರಿಶೀಲನೆ ನಡೆಸಿ, ಆಕ್ಷೇಪಣೆಗಳನ್ನು ಪರಿಶೀಲಿಸಲಿದ್ದಾರೆ. ಅಂತಿಮ ಪಟ್ಟಿ ಪ್ರಕಟಣೆ: ನವೆಂಬರ್ ೪ ರಂದು ಎಸ್‌ಐಆರ್ ಅಂತಿಮ ಮತದಾರರ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಲಿದೆ.