
ಬೆಂಗಳೂರು.ನ೪: ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಹೊಸ ಚಿಗುರು ಟ್ರಸ್ಟ್ (ರಿ)ವತಿಯಿಂದ “ನೃತ್ಯ ನಿರಂತರ ಶ್ರೀ ಲಕ್ಷ್ಮೀ ಕಲಾ ಉತ್ಸವ “ಎಂಬ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿವಿಧ ಜಿಲ್ಲೆಗಳಿಂದ ನೂರಾರು ನೃತ್ಯ ಕಲಾವಿದರು ಹಾಗೂ ನೃತ್ಯ ಗುರುಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು,ನೃತ್ಯ ಕಲೆಗೆ ಪ್ರೋತ್ಸಾಹಿಸುವುದು ಯುವ ಕಲಾವಿದರಿಗೆ ಪವಿತ್ರ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದು ಮುಖ್ಯ ಉದ್ಧೇಶವಾಗಿತ್ತು.
ಈ ಸಂದರ್ಭದಲ್ಲಿ ಕಲಾವಿದರಿಗೆ ಪ್ರಶಸ್ತಿ ಪತ್ರ,ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು ಹಾಗು ನೃತ್ಯ ಕ್ಷೇತ್ರಕ್ಕೆ ಸೇವೆ ಸಲಿಸುತ್ತಿರುವ ಗುರುಗಳಿಗೂ ವಿಶೇಷ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶ್ರೀ ಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಜಿ.ವಾಸುದೇವ್,ಧರ್ಮದರ್ಶಿಗಳಾದ ಜಿ.ಎಲ್.ಮಂಜುನಾಥ್,ಆಡಳಿತ ಮಂಡಳಿ,ನೃತ್ಯ ಗುರುಗಳು,ಪೋಷಕರು ಹಾಗೂ ಎಲ್ಲಾ ಕಲಾವಿದರಿಗೆ ಹೊಸ ಚಿಗುರು ಟ್ರಸ್ಟ್ ರವರು ಧನ್ಯ ವಾದಗಳನ್ನು ಸಲ್ಲಿಸಿದರು.






















