Home ಮುಖಪುಟ ಸುದ್ದಿ ಕುಖ್ಯಾತ ರೌಡಿ ಖಲೀಂ ಕೊಚ್ಚಿ ಕೊಲೆ

ಕುಖ್ಯಾತ ರೌಡಿ ಖಲೀಂ ಕೊಚ್ಚಿ ಕೊಲೆ

ಬೆಂಗಳೂರು, ಜೂ. ೭- ಕುಖ್ಯಾತ ರೌಡಿನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಸೂಲಿಬೆಲೆ ಗ್ರಾಮದ ಜನತಾ ಕಾಲೋನಿ ಬಳಿ ತಡರಾತ್ರಿ ನಡೆದಿದೆ.


ಸೂಲಿಬೆಲೆ ಗ್ರಾಮದ ಖಲೀಂ ಉಲ್ಲಾಖಾನ್ (೩೬) ಕೊಲೆಯಾದ ರೌಡಿಯಾಗಿದ್ದಾನೆ. ರೌಡಿ ಖಲೀಂ ಉಲ್ಲಾಖಾನ್ ಮೊಬೈಲ್ ನಲ್ಲಿ ಮಾತಾಡುತ್ತಿದ್ದಾಗ ಬಂದ ಅಪರಿಚಿತರ ಗುಂಪು ಅಟ್ಟಾಡಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದಾರೆ.


ಖಲೀಂ ಉಲ್ಲಾಖಾನ್ ಹೊಟ್ಟೆಯ ೨೦ ಕ್ಕೂ ಹೆಚ್ಚು ಕಡೆಗಳಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.