Home ಕ್ರೈಂ ಸುದ್ದಿಗಳು ಮದುವೆಯಾದ 15 ದಿನದಲ್ಲೇ ನವ ವರ ದಾರುಣ ಸಾವು : ಈಜಲು ಹೋದ ಯುವಕ ನೀರು...

ಮದುವೆಯಾದ 15 ದಿನದಲ್ಲೇ ನವ ವರ ದಾರುಣ ಸಾವು : ಈಜಲು ಹೋದ ಯುವಕ ನೀರು ಪಾಲು

ಯಾದಗಿರಿ:ಏ.29: ಮದುವೆಯ ಸಂಭ್ರಮ ಇನ್ನೂ ಮಗುಚಿ ಹೋಗುವ ಮುನ್ನವೇ ನವ ವರನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೊಂದೆನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭೀಮರಾಯ ಮ್ಯಾಗೇರಿ (32) ಮೃತಪಟ್ಟ ಯುವಕನಾಗಿದ್ದು, ಇವರು ಕೇವಲ ಎರಡು ವಾರಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಸಂತಸ ಇನ್ನೂ ಮನೆಯಲ್ಲೇ ನೆಲೆಸಿದ್ದ ವೇಳೆ, ಸ್ನೇಹಿತರೊಂದಿಗೆ ಗ್ರಾಮ ಹೊರವಲಯದ ತಗ್ಗಿನಲ್ಲಿ ಕೂಡಿಕೊಂಡಿದ್ದ ನೀರಿನ ಪ್ರದೇಶಕ್ಕೆ ಈಜಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈಜುವ ವೇಳೆ ನಿಯಂತ್ರಣ ತಪ್ಪಿದ ಭೀಮರಾಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗದೆ, ಯುವಕನ ಪ್ರಾಣ ಉಳಿಸಲಾಗಲಿಲ್ಲ.

ನವ ದಂಪತಿಯ ಜೀವನದ ಆರಂಭದಲ್ಲೇ ಸಂಭವಿಸಿದ ಈ ದುರಂತದಿಂದ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕದ ಛಾಯೆ ಆವರಿಸಿದೆ. ಬಂಧು-ಬಳಗದವರ ಆಕ್ರಂದನ ಮನಕಲುಕುವಂತಿದೆ.

ಈ ಸಂಬಂಧ ವಡಗೇರಾ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಗ್ರಾಮದಲ್ಲಿ ತೀವ್ರ ವಿಷಾದವನ್ನು ಮೂಡಿಸಿದ್ದು, ಯುವಕರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದೆ.