
ಮಹೇಶ್, ಸಿ.
ಬೆಂಗಳೂರು,ಜು.೨೧-ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುತ್ತಿರುವ ಕಟ್ಟಡ ಮತ್ತು ಭಗ್ನಾವಶೇಷ (ಅ&ಆ) ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ನಗರದ ಹೊರವಲಯದಲ್ಲಿರುವ ಅನುಪಯುಕ್ತ ಸರ್ಕಾರಿ ಕಲ್ಲು ಕ್ವಾರಿಗಳನ್ನು ಗುರುತಿಸಿ, ಪುನರುಪಯೋಗವಾಗದ ಅ&ಆ ಹಾಗೂ Iಟಿeಡಿಣ ತ್ಯಾಜ್ಯವನ್ನು ಅಲ್ಲಿ ವಿಲೇವಾರಿ ಮಾಡಲು ಜಿಬಿಎ ಮುಂದಾಗಿದೆ.
ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣೆ (ಅ&ಆ) ನಿಯಮಗಳು-೨೦೨೫ರ ಅನ್ವಯ ಸಂಗ್ರಹಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ PPP ಮಾದರಿಯಲ್ಲಿ ಒಟ್ಟು ೬ ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರನ್ನು ನೇಮಿಸಲಾಗಿದೆ. ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸುವವರೆಗೆ ತಾತ್ಕಾಲಿಕವಾಗಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಸರ್ಕಾರಿ ಕಲ್ಲು ಕ್ವಾರಿಗಳಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಜಿಬಿಎ ನಿಗದಿಪಡಿಸಿದ ಸ್ಥಳಗಳಿಗೆ ಗುತ್ತಿಗೆದಾರರು ಅಗತ್ಯ ವಾಹನಗಳ ಮೂಲಕ ಕಟ್ಟಡ ಅವಶೇಷಗಳನ್ನು ಸಾಗಿಸಿ ವಿಲೇವಾರಿ ಮಾಡಬೇಕಿದ್ದು, ಈ ವ್ಯವಸ್ಥೆಯಿಂದ ರಸ್ತೆ ಬದಿ ಹಾಗೂ ಖಾಲಿ ಜಾಗಗಳಲ್ಲಿ ನಡೆಯುತ್ತಿದ್ದ ಅನಧಿಕೃತ ತ್ಯಾಜ್ಯ ಸುರಿಯುವಿಕೆಗೂ ಕಡಿವಾಣ ಬೀಳುವ ನಿರೀಕ್ಷೆಯಿದೆ.
ಈ ಕುರಿತು ಜುಲೈ ೧೪ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ನಗರದ ರಸ್ತೆ ಬದಿಗಳಲ್ಲಿ ಕಟ್ಟಡ ಅವಶೇಷಗಳಿಂದ ಧೂಳು ಆವರಿಸಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಆದ್ಯತೆ ನೀಡಲಾಗಿದೆ.
ಈ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅನುಮೋದನೆ ನೀಡಿದ್ದು, ಪುನರುಪಯೋಗವಾಗದ ಪಾರಂಪರಿಕ ಅ&ಆ ಹಾಗೂ Iಟಿeಡಿಣ ತ್ಯಾಜ್ಯವನ್ನು ಅನುಪಯುಕ್ತ ಸರ್ಕಾರಿ ಕಲ್ಲು ಕ್ವಾರಿಗಳಲ್ಲಿ ವಿಲೇವಾರಿ ಮಾಡಲು ಒಪ್ಪಿಗೆ ನೀಡಿದೆ.
ಗುರುತಿಸಲಾದ ಪ್ರಮುಖ ಕಲ್ಲು ಕ್ವಾರಿಗಳು:
ಬೆಂಗಳೂರು ಪೂರ್ವ: ಬಿದರಹಳ್ಳಿ, ಮಾರೇನಹಳ್ಳಿ ಬೆಂಗಳೂರು ಉತ್ತರ: ಯಲಹಂಕ, ಜಾಲ, ವೆಂಕಟಾಪುರ ಬೆಂಗಳೂರು ದಕ್ಷಿಣ: ದಾಸನಪುರ, ವಿಟ್ಟಸಂದ್ರ, ಆನೇಕಲ್, ಜಿಗಣಿ, ಬೇಗೂರು.
ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ನಗರದ ಕಟ್ಟಡ ಭಗ್ನಾವಶೇಷ ತ್ಯಾಜ್ಯದ ನಿರ್ವಹಣೆ ಮತ್ತಷ್ಟು ವ್ಯವಸ್ಥಿತವಾಗಲಿದ್ದು, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.
































