Home ಕ್ರೈಂ ಸುದ್ದಿಗಳು ಆಸ್ತಿ ವಿವಾದಕ್ಕೆ ತಂದೆ, ಪತ್ನಿ ಹಾಗೂ ಮಕ್ಕಳಿಂದಲೇ ಕೊಲೆ!ಅಕ್ಕಂದಿರ ಪರ ಬಂದ ನ್ಯಾಯಾಲಯದ ತೀರ್ಪಿನಿಂದ ದ್ವೇಷ?...

ಆಸ್ತಿ ವಿವಾದಕ್ಕೆ ತಂದೆ, ಪತ್ನಿ ಹಾಗೂ ಮಕ್ಕಳಿಂದಲೇ ಕೊಲೆ!ಅಕ್ಕಂದಿರ ಪರ ಬಂದ ನ್ಯಾಯಾಲಯದ ತೀರ್ಪಿನಿಂದ ದ್ವೇಷ? ಐವರು ಆರೋಪಿಗಳ ಬಂಧನ: ಎಸ್‍ಪಿ ಸಿದ್ಧಾರ್ಥ್ ಗೋಯಲ್

ಜಮಖಂಡಿ: ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಮೃತದೇಹವನ್ನು ಗಲಗಲಿ ಸಮೀಪದ ಕೃಷ್ಣಾ ನದಿ ಹಿನ್ನೀರಿನಲ್ಲಿ ಎಸೆದಿರುವ ಪ್ರಕರಣವನ್ನು ಪೆÇಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಮೃತನ ತಂದೆ, ಪತ್ನಿ ಹಾಗೂ ಮಕ್ಕಳೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ತಿಳಿಸಿದ್ದಾರೆ.

ಮೃತರನ್ನು ಜಮಖಂಡಿ ನಗರದ ಸುವರ್ಣಾ ಚಿತ್ರಮಂದಿರದ ಸಮೀಪದ ನಿವಾಸಿ ಸಿದ್ದಪ್ಪ ಭೀಮಪ್ಪ ಯಮಗಾರ (50) ಎಂದು ಗುರುತಿಸಲಾಗಿದೆ. ಅವರು ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಅಕ್ಕಂದಿರ ಪರ ಬಂದ ತೀರ್ಪಿನಿಂದ ದ್ವೇಷ?

ಪೆÇಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಅವರ ಪ್ರಕಾರ, ಸಿದ್ದಪ್ಪ ಯಮಗಾರ ಅವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ವಿವಾದವಿತ್ತು. ಈ ಸಂಬಂಧ ನಡೆದಿದ್ದ ಸಿವಿಲ್ ವ್ಯಾಜ್ಯದಲ್ಲಿ ಸಿದ್ದಪ್ಪ ಅವರ ಅಕ್ಕಂದಿರ ಪರವಾಗಿ ನ್ಯಾಯಾಲಯದ ತೀರ್ಪು ಬಂದಿತ್ತು ಎನ್ನಲಾಗಿದೆ.

ಇದರಿಂದ ಸಿದ್ದಪ್ಪ ಅವರ ಪತ್ನಿ, ಮಕ್ಕಳು ಹಾಗೂ ತಂದೆಗೆ ಅವರ ಮೇಲೆ ದ್ವೇಷ ಉಂಟಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಸಿದ್ದಪ್ಪ ಅವರು ಉಳಿದ ಆಸ್ತಿಯನ್ನೂ ಕುಟುಂಬದ ಹೊರಗಿನವರಿಗೆ ವರ್ಗಾಯಿಸಬಹುದು ಎಂಬ ಆತಂಕ ಆರೋಪಿಗಳಲ್ಲಿ ಇತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದಪ್ಪ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದು ಪೆÇಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.

ಜಮೀನಿನ ಸಮೀಪವೇ ಕೊಲೆ; ನದಿ ಹಿನ್ನೀರಿನಲ್ಲಿ ಮೃತದೇಹ ಎಸೆತ

ಪೆÇಲೀಸ್ ಮಾಹಿತಿ ಪ್ರಕಾರ, ಸಿದ್ದಪ್ಪ ಅವರನ್ನು ಅವರ ಜಮೀನಿನ ಸಮೀಪದಲ್ಲೇ ಕೊಲೆ ಮಾಡಲಾಗಿದ್ದು, ಬಳಿಕ ಮೃತದೇಹವನ್ನು ಗಲಗಲಿ ಗ್ರಾಮದ ಸಮೀಪದ ಕೃಷ್ಣಾ ನದಿ ಹಿನ್ನೀರಿನಲ್ಲಿ ಎಸೆಯಲಾಗಿತ್ತು.

ಸಿದ್ದಪ್ಪ ಕಾಣೆಯಾಗಿರುವ ಕುರಿತು ಅವರ ಅಕ್ಕಂದಿರ ಕಡೆಯಿಂದ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಪೆÇಲೀಸರಿಗೆ ಪ್ರಕರಣದ ಹಿಂದೆ ಕೊಲೆಯ ಸಂಶಯ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣದ ವಿವರಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ.

ಐವರು ಆರೋಪಿಗಳ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಂದೆ ಭೀಮಪ್ಪ ಸಿದ್ದಪ್ಪ ಯಮಗಾರ, ಪತ್ನಿ ಶೈಲವ್ವ, ಪುತ್ರರಾದ ಕಾಡಪ್ಪ ಸಿದ್ದಪ್ಪ ಯಮಗಾರ ಮತ್ತು ರಮೇಶ ಸಿದ್ದಪ್ಪ ಯಮಗಾರ ಸೇರಿದಂತೆ
ಮಳೆಪ್ಪ ಸಿದ್ದಪ್ಪ ಬೆಳ್ಳುದ್ದಿ,ಮಹಾದೇವ ಕಟವಾಣಿ,ಮಂಜುನಾಥ ಮಾಳಿ,ಸಂಜಯ್ ದಡ್ಡಿಮಣಿ,ಸಂತೋಷ ಮಟ್ಟಿ ಐವರನ್ನು ಪೆÇಲೀಸರು ಬಂಧಿಸಿದ್ದಾರೆ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.

ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 157/2026 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ನ್ಯಾಯಾಲಯದ ತೀರ್ಪು ಹಾಗೂ ಕುಟುಂಬದೊಳಗಿನ ದ್ವೇಷದ ಆರೋಪಗಳು ಈ ಪ್ರಕರಣದ ಪ್ರಮುಖ ಆಯಾಮಗಳಾಗಿವೆ. ಪೆÇಲೀಸ್ ತನಿಖೆಯಲ್ಲಿ ಬಹಿರಂಗವಾದ ಅಂಶಗಳ ಆಧಾರದಲ್ಲಿ ಪ್ರಕರಣದ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.