
ಗುಳೇದಗುಡ್ಡ,ಜು.೭: ತ್ಯಾಗಬಲಿದಾನ ಹಾಗೂ ಭಾವೈಕ್ಯದ ಸಂಕೇತ ವಾದ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಭಾನುವಾರ ಹಿಂದೂ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಸ್ಥಳೀಯ ಪುರಸಭೆ ಹತ್ತಿರವಿರುವ ಹಿರೇಮಸೀದಿ ಬಳಿ ಪಟ್ಟಣ ಸೇರಿದಂತೆ ಮುರುಡಿ, ಕೋಟಿಕಲ್ಲ, ಪರ್ವತಿ, ಹುಲ್ಲಿಕೇರಿ ಮತ್ತಿತರ ಗ್ರಾಮಗಳಿಂದ ಆಗಮಿಸಿದ ದೇವರನ್ನು ಹೊತ್ತ ಡೋಲಿಗಳು ಭೇಟಿ ನೀಡಿ ತಮ್ಮ ಗ್ರಾಮಗಳಿಗೆ ತೆರಳಿದವು. ಪಟ್ಟಣ ಸೇರಿದಂತೆ ಗ್ರಾಮಗಳಿಂದ ಆಗಮಿಸಿದ ಯುವಕರಿಂದ ಹೆಜ್ಜೆ ಕುಣಿತ, ಹುಲಿವೇ?Àಧಾರಿಗಳ ಕುಣಿತ ಜನರನ್ನು ಸೆಳೆದವು. ಹಿರೇಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ಹಿಂದೂ ಮುಸ್ಲಿಂರು ಸಕ್ಕರೆಯನ್ನು ಹಂಚುವ ಮೂಲಕ ಭಾವೈಕ್ಯತೆಯಿಂದ ಮೊಹರಂ ಹಬ್ಬವನ್ನು ಸಂಭ್ರದಿAದ ಆಚರಿಸಿದರು.