Home ಜಿಲ್ಲೆ ಬೆಂಗಳೂರು ಸಂಸದ ಮಲ್ಲೇಶ್ ಬಾಬು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

ಸಂಸದ ಮಲ್ಲೇಶ್ ಬಾಬು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

ಕೋಲಾರ,ಮೇ,೧೩- ಅಂತರ ರಾಜ್ಯ ಬಸ್‌ಗಳು ಕೋಲಾರ ಮಾರ್ಗವನ್ನು ಹಾದು ಹೋಗುವ ಸಂದರ್ಭದಲ್ಲಿ ಸಂಜೆ ೬ ಗಂಟೆಯ ನಂತರದಲ್ಲಿ ನಗರದೊಳಗಿನ ಬಸ್ ನಿಲ್ದಾಣಕ್ಕೆ ಬಂದು ಹೋಗಲು ಕಡ್ಡಾಯ ಕ್ರಮ ಕೈಗೊಳ್ಳ ಬೇಕೆಂದು ಲೋಕಸಭಾ ಸದಸ್ಯ ಎಂ.ಮಲ್ಲೇಶ್ ಬಾಬು ಅವರು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.


ಲೋಕಸಭಾ ಸದಸ್ಯ ಮಲ್ಲೇಶ್ ಬಾಬು ಅವರು ಸಚಿವರೊಂದಿಗೆ ಅಂತರ ರಾಜ್ಯ ಬಸ್ಸುಗಳು ನಗರದ ಒಳಗೆ ಸಂಚಾರವನ್ನು ಸ್ಥಗಿತಗೊಳಿಸಿ ಬೈ ಪಾಸ್ ಮೂಲಕ ಸಂಚಾರ ಮಾಡುತ್ತಿದೆ. ಇದರಿಂದ ಸಂಜೆಯ ೬ ಗಂಟೆಯ ನಂತರದಲ್ಲಿ ಪ್ರಯಾಣಿಕರಿಗೆ ನಗರದೊಳಗೆ ಬರಲು ಸಮರ್ಪಕವಾದ ವಾಹನಗಳ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ ಹಾಗಾಗಿ ಸಂಜೆ ೬ ಗಂಟೆಯ ಬೈ ಪಾಸ್‌ನಲ್ಲಿ ಹಾದು ಹೋಗುವಂತ ಅಂತರಾಜ್ಯ ಬಸ್‌ಗಳು ಬೆಳೆಗ್ಗೆ ೬ ಗಂಟೆಯ ವರೆಗೆ ನಗರೊಳಗೆ ಬಸ್ ನಿಲ್ದಾಣದವರೆಗೆ ಬಂದು ಹೋಗುವಂತೆ ಸಾರಿಗೆ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸ ಬೇಕೆಂದು ಮನವಿ ಮಾಡಿದರು.


ಇದರಿಂದ ಕೋಲಾರ ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರಿಗೆ ಅನುಕೊಲಕರವಾಗುವುದು. ಅಂತರಾಜ್ಯ ಬಸ್‌ಗಳು ಕೋಲಾರ ನಗರದೊಳಗೆ ಬಾರದೆ ಹೊರಭಾಗದ ಬೈಪಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದ ನಗರದೊಳಗೆ ಬರಲು ಸಾರ್ವಜನಿಕ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗುತ್ತಿದೆ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ದರಿಗೆ ನಗರದೊಳಗೆ ಬರಲು ದುಬಾರಿ ದರದ ಆಟೋಗಳಿಗೆ ಗಂಟೆ ಗಟ್ಟಲೇ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗಾಗಿ ಬೈಪಾಸ್ ಮೂಲಕ ಹಾದು ಹೋಗುವಂತ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಾಗಲಿ ಖಾಸಗಿ ಬಸ್‌ಗಳಾಗಲಿ ನಗರದೊಳಗಿನ ಬಸ್ ನಿಲ್ದಾಣಕ್ಕೆ ಅಗಮಿಸಿ ನಂತರದಲ್ಲಿ ಮುಂದಿನ ಪ್ರಯಾಣ ಆರಂಭಿಸಿದಲ್ಲಿ ನಗರ ಮತ್ತು ಗ್ರಾಮೀಣ ಜನತೆಗೆ ಅನುಕೂಲಕರವಾಗಲಿದೆ ಎಂದು ಸಚಿವರಿಗೆ ವಿವರಿಸಿದರು.


ವಿಶೇಷವಾಗಿ ತಿರುಪತಿ, ಚೆನೈ ಬಸ್‌ಗಳಲ್ಲದೆ ಇತರೆ ಅಂತರಾಜ್ಯ ಬಸ್‌ಗಳು ನಗರ ಹೊರವಲಯದ ಬೈಪಾಸ್ ಮಾರ್ಗದಲ್ಲಿ ಹಾದು ಹೋಗುತ್ತದೆ. ಮಂಗಳೂರು, ಮೈಸೂರು, ಧಮಸ್ಥಳ , ಮಂತ್ರಾಲಯ, ತಿರುಮಲ, ಕಡಬ, ನಲ್ಲೂರು, ಮುಂತಾದ ಕಡೆ ಐರವಾತ, ಅಂಬಾರಿ ಮುಂತಾದ ವಿಶೇಷ ಬಸ್‌ಗಳು ಸಂಚರಿಸುತ್ತಿದ್ದು ಇವುಗಳು ನಗರದೊಳಗೆ ಬಾರದೆ ಬೈಪಾಸ್ ಮಾರ್ಗದಲ್ಲೇ ಹಾದು ಹೋಗುತ್ತವೆ ಅದ್ದರಿಂದ ಎಲ್ಲಾ ಬಸ್‌ಗಳು ನಗರದ ಬಸ್ ನಿಲ್ದಾಣದ ಮೂಲಕವೇ ಹಾದು ಹೋಗಲು ವಿಶೇಷವಾದ ಸೂಚನೆಯನ್ನು ಜಾರಿ ಮಾಡಬೇಕೆಂದು ಮನವಿ ಮಾಡಿದರು

ಬೈ ಪಾಸ್ ಮಾರ್ಗದಲ್ಲಿ ಸರ್ವಿಸ್ ರಸ್ತೆಗಳ ಸೌಲಭ್ಯಗಳು ಇರುವುದರಿಂದ ಅಂತರಾಜ್ಯ ಬಸ್‌ಗಳಿಗೆ ನಗರದೊಳಗೆ ಬಂದು ಹೋಗಲು ಅನುಕೊಲಕರವಾಗಿದೆ. ಬಸ್‌ಗಳ ನಿಲುಗಡೆಗೆ ವ್ಯವಸ್ಥೆಯನ್ನು ಕಲ್ಪಸಿದಲ್ಲಿ ಸಾರ್ವಜನಿಕರಿಗೆ ಅನುಕೊಲಕರವಾಗುವುದು ವಿಶೇಷವಾಗಿ ಎ.ಪಿ.ಎಂ.ಸಿ. ಟೇಕಲ್ ರಸ್ತೆ, ಟಮಕ ಮಾರ್ಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸ ಬೇಕೆಂದು ತಿಳಿಸಿದರು.


ಸಚಿವ ರಾಮಲಿಂಗರೆಡ್ಡಿ ಅವರು ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು ಅವರ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿ ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ನಮ್ಮ ಮನವಿಯನ್ನು ಪ್ರಸ್ತಾಪಿಸಿ ಸಾಧಕ ಬಾದಕಗಳನ್ನು ಅರಿತು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಭರವಸೆ ನೀಡಿದರು.