
ಬೆಂಗಳೂರು,ಏ.೨೭- ಕೃಷಿ ಹೊಂಡಕ್ಕೆ ಬಿದ್ದು ತಾಯಿ -ಮಗಳು ಇಬ್ಬರು ಸಾವನ್ನಪ್ಪಿರುವ ಮನಕಲುಕುವ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಸಾಗರ ಗ್ರಾಮದಲ್ಲಿ ಲಾವಣ್ಯ (೨೮),ಹಾಗೂ ಅವರ ಪುತ್ರಿ ಲಕ್ಷತಾ (೮) ಮೃತಪಟ್ಟವರು. ೨೦೧೭ರಲ್ಲಿ ಗ್ರಾಮದ ಸಂಪತ್ ಜೊತೆಗೆ ಲಾವಣ್ಯ ವಿವಾಹವಾಗಿದ್ದರು. ಇನ್ನೂ ತಾಯಿ ಮಗಳ ಸಾವಿನ ವಿಚಾರವಾಗಿ ಮಹಿಳೆಯ ಪೋಷಕರು ಪತಿ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮಹಿಳೆಯ ಪೋಷಕರು ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.























