Home ಜಿಲ್ಲೆ ಕಲಬುರಗಿ ಮನೆ ಬೀಗ ಮುರಿದು 32.18 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಮನೆ ಬೀಗ ಮುರಿದು 32.18 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಏ.27-ಮನೆ ಬೀಗ ಮುರಿದು 32.18 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ನಗರದ ಖಮರ್ ಕಾಲೋನಿಯಲ್ಲಿ ನಡೆದಿದೆ.
ರಫಿಕ್ ಮೊಹ್ಮದ್ ರುಕ್ಕುಮುದ್ದಿನ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 55 ಸಾವಿರ ರೂ.ನಗದು, 224.08 ತೂಕದ ಬಂಗಾರದ ಆಭರಣ ಸೇರಿ 32.18 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಇವರು ತಮ್ಮ ಸಹೋದರ ಹಾರ್ಟ್ ಚೆಕಪ್‍ಗೆಂದು ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.