
ಬೀದರ:ಮೇ.೬: ಇಂಡಿಯನ್ ಸ್ಪೋರ್ಟ್ಸ್ ವಿಂಗ್‌ನ ರಾಜ್ಯಾಧ್ಯಕ್ಷರಾದ ಮಹ್ಮದ ಪರ್ವೇಜ್ ಖಾನ್ (ತಂದೆ: ಮಹ್ಮದ ಅಯಾಜ್ ಖಾನ್) ಅವರಿಗೆ ಮಲೇಶಿಯಾದ ವೈಧಾಮ್ ಕಳಂಗನಲ್ಲಿ ಮೇ ೨, ೨೦೨೬ ರಂದು ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಶಾಂತಿ ಮತ್ತು ಕ್ರೀಡಾ ರಾಯಭಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಭಾರತದಿಂದ ಸುಮಾರು ೧೦೦ ಜನರು ಹಾಗೂ ಮಲೇಶಿಯಾದಿಂದ ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪರ್ವೇಜ್ ಖಾನ್ ಅವರು ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಗುರುತಿಸಿ, ಅವರನ್ನು ಮಲೇಶಿಯಾಗೆ ಆಹ್ವಾನಿಸಿ ಗೌರವಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ನೂರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹ್ಮದ ಇಮ್ರಾನ್ ಸಯೀದ್ ಅವರು, ಪರ್ವೇಜ್ ಖಾನ್ ಅವರ ಸಾಧನೆ ಯುವಕರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಈ ಗೌರವದ ಹಿನ್ನೆಲೆ ನೂರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಪ್ರಮುಖರಾದ ಡಾ. ಮಹ್ಮದ ಯುಸುಫ್ ಖಾನ್, ಸಮೀರ್ ಖಾನ್, ವಿಠಲರಾವ್, ಸುಕೇಶ್ ಸೇರಿದಂತೆ ಎಲ್ಲ ಸಿಬ್ಬಂದಿ ಸದಸ್ಯರು ಪರ್ವೇಜ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.























