ಕಾಣೆಯಾದ ವ್ಯಕ್ತಿ ಕೊಲೆ: ತನಿಖೆಯಿಂದ ಬಯಲು:ಮೂವರ ಬಂಧನ

ಕಲಬುರಗಿ,ಜು.7: ಮಹಿಳೆಯೊಂದಿಗೆ ಇದ್ದ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಉಂಟಾದ ಮನಸ್ತಾಪದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ನಗರದ ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ಗಣೇಶ ನಗರದ ನಿವಾಸಿ ರಾಘವೇಂದ್ರ ನಾಯಕ್ ( 39) ಕೊಲೆಯಾದ ವ್ಯಕ್ತಿ.ಗುರುರಾಜ ಅಲಿಯಾಸ್ ಗುರು ಶೇಷಪ್ಪ ನೆಲೋಗಿ ( 36), ಅಶ್ವಿನಿ ಅಲಿಯಾಸ್ ತನು ರಾಜಶೇಖರ ಮಲ್ಲಾಬಾದ (26) ಮತ್ತು ಲಕ್ಷ್ಮೀಕಾಂತ ಮಲ್ಲಿಕಾರ್ಜುನ ಮಾಲಿ ಪಾಟೀಲ (28) ಬಂಧಿತ ಆರೋಪಿಗಳು
ಘಟನೆಯ ವಿವರ:
ನಗರದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ನಾಯಕನು ಸುಮಾರು 2 ತಿಂಗಳಿಂದ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಸುರೇಖಾ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ತನಿಖೆಗೆ ಉಪ ಪೆÇಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್,ಪ್ರವೀಣ್ ಹೆಚ್ ನಾಯಕ್ ಮಾರ್ಗದರ್ಶನದಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಸ್ಟೇಷನ್ ಬಜಾರ ಪೆÇಲೀಸ್ ಠಾಣೆ ಪಿಐ ಶಕೀಲ ಅಹ್ಮದ ಅಂಗಡಿ, ಪಿಎಸ್ ಐ ಇಂದಿರವ್ವ ,ಎಎಸ್ ಐ ಶಿವಶರಣಪ್ಪ ಕೋರಳ್ಳಿ ಮತ್ತು ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ರಾಘವೇಂದ್ರ ಇತನಿಗೆ ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆ ವಡ್ಡರಗಲ್ಲಿ ಕೃಷ್ಣಾ ನಗರದ ಗುರುರಾಜ ಅಲಿಯಾಸ್ ಗುರು ಇತನೊಂದಿಗೆ ತಂಟೆ ತಕರಾರು ಇತ್ತು ಎಂದು ಮಾಹಿತಿ ದೊರೆಯಿತು.ಈ ನಿಟ್ಟಿನಲ್ಲಿ ಮತ್ತಷ್ಟು ತನಿಖೆ ಚುರುಕುಗೊಳಿಸಿ ಮಾಹಿತಿ ಕಲೆಹಾಕಿದಾಗ ರಾಘವೇಂದ್ರ ಈತನು ಮೊದಲು ಅಶ್ವಿನಿ ಅಲಿಯಾಸ್ ತನು ಎಂಬ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದ ಎಂದು ಗೊತ್ತಾಯಿತು.ಸ್ವಲ್ಪ ದಿನಗಳ ನಂತರ ಅಶ್ವಿನಿ ರಾಘವೇಂದ್ರನನ್ನು ಬಿಟ್ಟು ಗುರುರಾಜ ಅಲಿಯಾಸ್ ಗುರು ಸಂಬಂಧ ಬೆಳೆಸಿದಳು. ಇದು ಇವರಿಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಕಳೆದ ಮಾರ್ಚ 12 ರಂದು ರಾತ್ರಿ 8.30ರ ಸುಮಾರಿಗೆ ರಾಘವೇಂದ್ರನು ಕಲಬುರಗಿ ನಗರದ ಸುಪರ ಮಾರ್ಕೆಟ್ ಹತ್ತಿರ ಇರುವ ಒಂದು ಲಾಡ್ಜ ಹತ್ತಿರ ಇದ್ದ ಮಾಹಿತಿ ಪಡೆದ ಮೂವರು ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಆತನನ್ನು ಕೂಡಿಸಿಕೊಂಡು ಕೃಷ್ಣಾ ನಗರದ ಸ್ಮಶಾನ ಭೂಮಿ ಹತ್ತಿರ ಬಂದು ಅಲ್ಲಿ ಕೈಯಿಂದ ಮತ್ತು ಬಡಿಗೆಗಳಿಂದ ಹೊಡೆದು ಕೊಲೆಮಾಡಿ ನಂತರ ಶವವನ್ನು ಕಾರಿನಲ್ಲಿ ಹಾಕಿಕೊಂಡು ಶಹಾಬಾದ ಮುಖಾಂತರ ರಾಯಚೂರ ಜಿಲ್ಲೆಯ ಶಕ್ತಿ ನಗರದ ಕೃಷ್ಣಾ ಬ್ರಿಡ್ಜ್ ಮೇಲಿಂದ ನದಿಯಲ್ಲಿ ಶವವನ್ನು ಎಸೆದು ಬಂದಿದ್ದಾರೆ.ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಡಾ.ಶರಣಪ್ಪ ಅವರು ವಿವರಿಸಿದರು.