
ಕನಕಪುರ, ಮಾ.೨- ನಗರದ ಪ್ರವಾಸಿ ಮಂದಿರದ ಬಳಿ ಇರುವ ಟ್ರೀ ಪಾರ್ಕನಲ್ಲಿ ಕಳೆದ ರಾತ್ರಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಲಕ್ಷಾಂತರ ರೂಗಳ ಗಿಡಮೂಲಿಕೆಗಳು ನಾಶವಾಗಿವೆ.
ಪ್ರವಾಸಿ ಪ್ರವಾಸಿ ಮಂದಿರ ಮತ್ತು ಕೃಷಿ ಇಲಾಖೆಯ ಪಕ್ಕದಲ್ಲೆ ಇರುವ ಟ್ರೀ ಪಾರ್ಕನಲ್ಲಿ ಕಳೆದ ಹಲವಾರು ದಿನಗಳಿಂದ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚುತಿದ್ದು ಸುತ್ತಮುತ್ತಲ ವಾಸಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ.
ಕಳೆದ ರಾತ್ರಿ ಸರಿಸುಮಾರು ೯.೩೦ರ ವೇಳೆಗೆ ಕಾಣಿಸಿಕೊಂಡ ಅಗ್ನಿಯು ಸಾಕಷ್ಟು ಗಿಡಗಳು, ಮತ್ತು ಬೆಲೆಬಾಳುವ ಗಿಡಮೂಲೆಗಳು ಈ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ.
ಕಿಡಿಗೇಡಿಗಳು ಪಾರ್ಕಿಗೆ ಬಂದು ಮೋಜು ಮಸ್ತಿಯನ್ನು ಮಾಡಿ ಹೋಗುವ ಸಂದರ್ಭದಲ್ಲಿ ಬೆಂಕಿಯನ್ನು ಹಚ್ಚು ತಿದ್ದು ಬೀಟ್ ವಾಚರ್ ಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಈರೀತಿಯ ಅಗ್ನಿ ಅವಗಡಗಳು ನಡೆಯುತ್ತಿವೆ. ತಾಲೂಕಿನ ಅನೇಕ ಕಾಡುಗಳಲ್ಲಿ ಈರೀತಿಯ ಅಗ್ನಿ ಅವಗಡಗಳು ಸಂಭವಿಸುತಿದ್ದು ಅರಣ್ಯ ಇಲಾಖೆ ನಿದ್ದೆಗೆ ಜಾರಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಗ್ನಿಕಾಣಿಸಿಕೊಂಡ ನಂತರ ಸಾರ್ವಜನಿಕರ ದೂರಿನ ಮೇರೆಗೆ ಟ್ರೀಪಾರ್ಕನ ಬೀಟ್ ವಾಚರ್ ಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸುತಿದ್ದಂತೆ ಅಗ್ನಿಶಾಮಕದಳವು ಸಹ ಬಂದು ಇವರ ಕಾರ್ಯಕ್ಕೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ಅನಾವುತಗಳು ತಪ್ಪಿದಂತೆ ಆಯಿತು.
ಅಕ್ಕಪಕ್ಕದ ಮನೆಯವರು ರಸ್ತೆ ಪಕ್ಕದಲ್ಲೇ ಮರದ ಕೆಳಗಡೆ ಕಾರುಗಳು ದ್ವಿಚಕ್ರವಾಹನಗಳನ್ನು ನಿಲ್ಲಿಸಿದ್ದು ಅಗ್ನಿಸಾಮಕ ದಳದವರು ಕಾರಗಳು ನಿಲ್ಲಿಸಿರುವ ಜಾಗದಲ್ಲಿ ತರಗೆಲೆಗಳ ಮೇಲೆ ನೀರು ಸಂಪಡಿಸದಿದ್ದರೆ ಕಾರುಗಳು ಬೆಂಕಿಗೆ ಆಹುತಿಯಾಗುತಿದ್ದವು. ಒಟ್ಟಿನಲ್ಲಿ ನಿನ್ನೆ ರಾತ್ರಿ ಆಗುತಿದ್ದ ಭಾರಿ ಅನಾಹುತ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಚರಣೆಯ ಹಿನ್ನೆಲೆಯಲ್ಲಿ ತಪ್ಪಿದಂತೆ ಆಗಿದೆ.


























