
ಯಾದಗಿರಿ: ನವರಾತ್ರಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಜಗನ್ಮಾತೆ ಅಂಬಾ ಭವಾನಿ ದೇವಿಯು ರೈತರ ಸಂಕಷ್ಟಗಳನ್ನು ದೂರ ಮಾಡಿ, ಅವರು ಬಿತ್ತನೆ ಮಾಡಿದ ಬೆಳೆಗಳಿಗೆ ಉತ್ತಮ ಫಸಲು ಕರುಣಿಸುವ ಮೂಲಕ ಅನ್ನದಾತರ ಬದುಕು ಹಸನಾಗುವಂತೆ ಆಶೀರ್ವದಿಸಲಿ ಎಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಪ್ರಾರ್ಥಿಸಿದರು.
ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಹಿಂದೂ ಸೇವಾ ಸಮಿತಿಯಿಂದ ಸ್ಥಾಪಿಸಲಾದ ಅಂಬಾ ಭವಾನಿ ದೇವಿಯ ಮೂರ್ತಿಗೆ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿದ ಅವರು, ಜಿಲ್ಲೆಯ ರೈತರ ಏಳಿಗೆ ಹಾಗೂ ಸಮೃದ್ಧಿಗಾಗಿ ತಾಯಿ ಜಗನ್ಮಾತೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ಅನ್ನದಾತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ರೈತರ ಈ ಸಂಕಷ್ಟ ದೂರವಾಗಿ ಅವರಿಗೆ ನೆಮ್ಮದಿ ದೊರೆಯಬೇಕಿದೆ. ತಾಯಿ ಅಂಬಾ ಭವಾನಿಯ ಕೃಪೆಯಿಂದ ರೈತರ ಬೆಳೆಗಳು ಉಳಿದು, ಉತ್ತಮ ಇಳುವರಿ ಬಂದು ಅವರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ರಾಚಣ್ಣಗೌಡ ಮುದ್ನಾಳ ಹೇಳಿದರು.
ರೈತರ ಸಂಕಷ್ಟ ದೂರವಾಗಿ ಅನ್ನದಾತರ ಬದುಕು ಹಸನಾಗಲಿ ಎಂಬ ಆಶಯದೊಂದಿಗೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರದ ಹಿರಿಯರಾದ ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಕಾಳೆಬೆಳಗುಂದಿ, ಹನುಮಂತ ಇಟಗಿ, ಶರಣಗೌಡ ಅಲಿಪುರ, ಸುರೇಶ್ ರಾಠೋಡ, ಶಾಂತುಗೌಡ ಪಗಲಪುರ, ಶರಣಗೌಡ ಐಕೂರ, ರಮೇಶ್ ಕೋಟಿಮನಿ, ಮಲ್ಲಿಕಾರ್ಜುನ ಜಲ್ಲಪ್ಪನೋರು, ರವಿ ಮುದ್ನಾಳ, ಅನಿಲ್ ಕರಾಟೆ, ಶಿವರಾಜ್ ದಾಸನಕೆರೆ, ಹಣಮಂತ ವಲ್ಯಾಪುರ, ಸಿದ್ರಾಮರೆಡ್ಡಿ, ತಿಪ್ಪಾರೆಡ್ಡಿ, ಆನಂದ್ ರಾಠೋಡ, ಮಲ್ಲಿಕಾರ್ಜುನ ತಳಕ, ವಿಶ್ವನಾಥ ಕಾಜಗಾರ ಹಾಗೂ ಅಮ್ಮನಗೌಡ ಅನುಸೂಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.























