Home ಜಿಲ್ಲೆ ಬೆಂಗಳೂರು ಮೇ,೧೬ ಮುಸ್ಲಿಂ ಸಮುದಾಯದ ಬೃಹತ್ ಸಮಾವೇಶ

ಮೇ,೧೬ ಮುಸ್ಲಿಂ ಸಮುದಾಯದ ಬೃಹತ್ ಸಮಾವೇಶ

ಕೋಲಾರ.ಮೇ,೧೦ -ನಮ್ಮ ಓಟಿನಿಂದ ನೀವು ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿದು ೩ ವರ್ಷಗಳೇ ಕಳೆದಿದೆ ಅದರೆ ನಮಗೇನು ಕೊಟ್ಟಿರಿ ? ಎಂದು ಆಲ್ಪಸಂಖ್ಯಾತರು ಮೇ ೧೬ ರಂದು ಬೆಂಗಳೂರಿನ ಪುರಭವನದ ಮುಂದೆ ರಾಜ್ಯ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಲು ಮುಸ್ಲಿಂ ಸಮುದಾಯದ ಬೃಹತ್ ಸಮಾವೇಶವನ್ನು ಆಯೋಜಿಸಿದೆ.


ರಾಜ್ಯದಲ್ಲಿ ಮೊನ್ನೆ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಲಿಲ್ಲ , ಪಕ್ಷದ ವಿರೋಧ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದರು ಎಂಬ ಆರೋಪದ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್, ಹಾಗೂ ರಾಜ್ಯ ಕಾಂಗ್ರೇಸ್ ಪಕ್ಷದ ಆಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬರ್ ಸೇರಿದಂತೆ ಅವರ ಸ್ಥಾನಮಾನಗಳಿಂದ ವಜಾಗೊಳಿಸಿದ್ದರು.


ಪಕ್ಷದ ನಿಯಮಾನುಸಾರ ಆರೋಪದ ನೋಟಿಸ್ ಜಾರಿ ಮಾಡದೆ ಅವರಿಂದ ಯಾವೂದೇ ಸ್ವಷ್ಟನೆ ಪಡೆಯಲು ಅವಕಾಶ ನೀಡದೆ ಏಕಾ ಏಕಿ ವಜಾ ಗೊಳಿಸಿರುವುದು ಆಲ್ಪಸಂಖ್ಯಾತ ಸಮುದಾಯದವರರಲ್ಲಿ ಅಸಮಾಧಾನ ಮುಗಿಲೆದ್ದಿದೆ. ಮತ್ತೊಂದು ಕಡೆ ಸಚಿವ ಜಮೀರ್ ಅವರಿಗೊ ಸಚಿವ ಸಂಪುಟದ ಪುನರ್ ರಚನೆಯಲ್ಲಿ ಕೈ ಬಿಡಲಾಗುವುದು ಎಂಬ ವಿಷಯವು ಕಾಂಗ್ರೇಸ್ ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಆಲ್ಪಸಂಖ್ಯಾತರು ತೀವ್ರ ಅಸಮಾಧಾನ ಹೊಂದಿದ್ದಾರೆ.


ಆಲ್ಪಸಂಖ್ಯಾತ ಸಮುದಾಯದ ಧರ್ಮಗುರುಗಳು ಸಹ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೇಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಸಿಗದೆ ವಂಚನೆಯಾಗಿದೆ . ಕೊಡಲೇ ಮೀಸಲಾತಿ ಪ್ರಕಾರ ಸಮುದಾಯದವರಿಗೆ ಸ್ಥಾನಮಾನಗಳು ಸಿಗದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂಬ ಎಚ್ಚರಿಕೆಯ ಪಾಠದ ಸಂದೇಶವನ್ನು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಘೋಷಿಸಿದ್ದಾರೆ.


ಇದರ ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ಇದೇ ೧೬ ರಂದು ಪುರಭವನದ ಮುಂದೆ ಬಹಿರಂಗ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಹಕ್ಕುಗಳು, ಸಮಾನತೆ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಮಂಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರಶ್ನಿಸಲಿದ್ದಾರೆ.


ಇದರಿಂದ ಸರ್ಕಾರಕ್ಕೆ ಮುಸ್ಲಿಂ ಸಮುದಾಯಕ್ಕೆ ಅಗಿರುವ ಅನ್ಯಾಯಗಳು, ವಂಚನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಿದೆ.


ಸ್ವಾತಂತ್ರ್ಯ ಪೂರ್ವದಿಂದಲ್ಲೂ ಭಾರತದಲ್ಲಿ ಎಲ್ಲಾ ಹೋರಾಟಗಳಲ್ಲೂ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ಬೆಂಬಲವನ್ನು ನೀಡುತ್ತಾ ಕಾಂಗ್ರೆಸ್ ಬೆನ್ನಲುಬು ಅಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಗಮನ ಸೆಳೆದು ಮುಸ್ಲಿಂ ಸಮುದಾಯಕ್ಕೆ ನೀಡ ಬೇಕಾಗಿರುವ ಅದ್ಯತೆಗಳ ಕುರಿತು ಕಾಂಗ್ರೇಸ್ ಪಕ್ಷಕ್ಕೆ ಜಾಗೃತೆ ಮೂಡಿಸಿ ಎಚ್ಚೆತ್ತು ಕೊಳ್ಳುವಂತೆ ಮಾಡಲಿದೆ.


ಅದರೂ ಸಹ ಕಾಂಗ್ರೇಸ್ ಪಕ್ಷವು ಮುಸ್ಲಿಂ ಸಮುದಾಯದ ಬೇಡಿಕೆಗಳು ಮತ್ತು ಹಕ್ಕುಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ಮುಸ್ಲಿಂ ಸಮುದಾಯದಲ್ಲಿ ಕಾಂಗ್ರೇಸ್ ಪಕ್ಷವು ಕವಲು ಹಾದಿ ಹಿಡಿಯಲಿದೆ ಎಂಬುವುದು ಖಚಿತವಾಗಿದೆ. ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ಮುಂದಿನ ಚುನಾವಣೆಗಳಲ್ಲಿ ಭಾರಿ ಹೊಡೆತ ಬೀಳಲಿದೆ ಎಂಬುವುದನ್ನು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ ಎಂಬುವುದು ಕೋಲಾರ ಮುಸ್ಲಿಂ ನಾಯಕರ ಹೇಳಿಕೆಯಾಗಿದೆ.