
ಕೋಲಾರ,ಮೇ,೧೧-ಜಿಲ್ಲೆಯಲ್ಲಿ ಅಲ್ಲಲ್ಲಿ ಬಿರುಗಾಳಿ ಸಮೇತ ಸುರಿದ ಮಳೆಯಿಂದ ಮಾವು, ತರಕಾರಿ ಬೆಳೆಗಳಿಗೆ ಹಾನಿ ಉಂಟಾಗಿದ್ದು, ಬಿರುಗಾಳಿಂದಾಗಿ ಇಟ್ಟಿಗೆ ಫ್ಯಾಕ್ಟರಿ ಮೇಲ್ಚಾವಣಿ ಶೀಟ್ ನೆಲಕಚ್ಚಿವೆ. ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಸಂಜೆ ಸಮಯದಲ್ಲಿ ಅಲ್ಲಲ್ಲಿ ಮಳೆ ಗಾಳಿ ಕಾಣಿಸಿಕೊಳ್ಳುತ್ತಿದೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಮಳೆಯ ಜೊತೆಗೆ ಬಿರುಗಾಳಿ ಬೀಸಿದ ಕಾರಣ ಋತುವಿಗೆ ಬಂದಿದ್ದ ಮಾವು ನೆಲಕಚ್ಚುವಂತಾಯಿತು. ಬಿರುಬಾಳಿಯಿಂದಾಗಿ ತರಕಾರಿ ಬೆಳೆಗಳಿಗೂ ನಷ್ಟ ಉಂಟಾಗಿದೆ.
ಕೆಲವು ಭಾಗಗಳಲ್ಲಿ ಬಿರುಗಾಳಿ ಮಳೆಯಿಂದ ಮಾವು ಸೇರಿದಂತೆ ತರಕಾರಿ ಬೆಳೆಗಳಿಗೆ ನಷ್ಟ ಉಂಟಾಗಿದೆ. ಮಾವು ಮಾರುಕಟ್ಟೆ ಪ್ರವೇಶಮಾಡುವ ಹಂತದಲ್ಲಿರುವಾಗ ಬಿರುಗಾಳಿಗೆ ನೆಲಕಚ್ಚುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯಲ್ಲಿ ಮಳೆಯ ಜೊತೆ ಬೀಸಿದ ಬಿರುಗಾಳಿಗೆ ಇಟ್ಟಿಗೆ ಫ್ಯಾಕ್ಟರಿಗಳ ಮೇಲ್ಚಾವಣಿಗಳು ನೆಲಕಚ್ಚಿದ್ದು ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಫ್ಯಾಕ್ಟರಿ ಮಾಲೀಕರು ತಿಳಿಸಿದ್ದಾರೆ.ಅನೇಕ ತರಕಾರಿ ತೋಟಗಳಲ್ಲಿ ಕ್ಯಾಪ್ಸಿಕಂ, ಟೊಮೆಟೊ, ಕೋಸು ಬೆಳೆಗಳಿಗೆ ಹಾನಿ ಉಂಟಾಗಿದೆ ಏನಾಗಿದೆ.
ಕ್ಯಾಪ್ಸಿಕಂ ಮತ್ತು ಟೊಮೆಟೋ ಬೆಳೆಗಳಿಗೆ ಅಳವಡಿಸಿದ್ದ ಮೇಸ್ಸು ಮತ್ತು ಕಟ್ಟಿಗೆಗಳು ನೆಲಕ್ಕೆ ಉರುಳಿದ್ದು ಇದರಿಂದ ಅಪಾರ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದೆ. ಭಾನುವಾರ ರಜಾ ಇರುವ ಕಾರಣ ಅಧಿಕಾರಿಗಳು ಕೈಗೆ ಸಿಗದೇ ಇರುವುದರಿಂದ ಇಲಾಖೆಯ ಗಮನಕ್ಕೆ ತರಲು ಸಾಧ್ಯವಾಗಲಿಲ್ಲ. ಬೆಳೆಗಳಿಗೆ ನಷ್ಟ ಆಗಿರುವ ಬಗ್ಗೆ ಇಲಾಖೆಗೆ ಮನವಿ ಮಾಡಿ ಪರಿಹಾರಕ್ಕೆ ಒತ್ತಾಯಿಸುವುದಾಗಿ ರೈತರು ತಿಳಿಸಿದ್ದಾರೆ.
ಮಾವಿಗೆ ಪ್ರಸ್ತುತ ಮಳೆ ಅವಶ್ಯಕತೆಯಿದ್ದು, ಮಳೆಯ ಜೊತೆ ಬಿರುಗಾಳಿ ಬೀಸುತ್ತಿರುವುದರಿಂದ ಖುತುವಿಗೆ ಬಂದಿರುವ ಮಾವು ನೆಲಕಚ್ಚುತ್ತಿರುವುದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಠ ಉಂಟಾಗುತ್ತಿದ್ದು, ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.


























