Home ಜಿಲ್ಲೆ ಕಲಬುರಗಿ ಶಾಸಕ ಮತ್ತು ಅರುಣಕುಮಾರ ಪಾಟೀಲ ವಿರುದ್ಧ ಸಿಎಂಗೆ ಮಾಲಿಕಯ್ಯಾ ಗುತ್ತೇದಾರ ದೂರು

ಶಾಸಕ ಮತ್ತು ಅರುಣಕುಮಾರ ಪಾಟೀಲ ವಿರುದ್ಧ ಸಿಎಂಗೆ ಮಾಲಿಕಯ್ಯಾ ಗುತ್ತೇದಾರ ದೂರು

ಅಫಜಲಪುರ:ಏ.೧೬:ಮತಕ್ಷೇತ್ರದ ಕಾಂಗ್ರೆಸ್ ಪಕ್ಷದೊಳಗೆ ಕಳೆದೊಂದು ತಿಂಗಳಿAದ ಆಗುತ್ತಿರುವ ಆರೋಪ,ಪ್ರತ್ಯಾರೋಪಗಳ ಚಂಡು ಈಗ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಂಗಳಕ್ಕೆ ಬಿದ್ದಿದೆ.ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ವಿರುದ್ಧ ಸಿಡಿದೆದ್ದಿದ್ದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾಗಿ ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರು ಅಫಜಲಪುರ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಹಿನ್ನಡೆ ಆಗುತ್ತಿದೆ.ಅಲ್ಲದೇ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ದುರಾಡಳಿತ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಿದರೆ ಪಕ್ಷಕ್ಕೆ ಉಳಿಗಾಲವಿದೆ, ಸರ್ಕಾರದಿಂದ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಕೇವಲ ಒಂದೇ ಸಮುದಾಯಕ್ಕೆ ಅವಕಾಶಗಳು ನೀಡುತ್ತಿದ್ದಾರೆ.

ಹಿಂದುಳಿದ ಸಮುದಾಯಗಳಿಗೆ ಯಾವುದೇ ಅವಕಾಶಗಳು ನೀಡದೆ ಶಾಸಕ ಎಂ.ವೈ.ಪಾಟೀಲ್ ಹಾಗೂ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ವಂಚಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ಹಿನ್ನಡೆಯಾಗುವ ಸಂಭವ ಇರುವುದರಿಂದ,ಈ ಕೂಡಲೇ ವರಿಷ್ಠರು ಮಧ್ಯೆ ಪ್ರವೇಶಿಸಿ ಕಡಿವಾಣ ಹಾಕಿ ಎಂದು ದೂರ ಕೊಟ್ಟಿದ್ದಾರೆ.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಶೀಘ್ರವೇ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ ಶಾಸಕ ಎಂ.ವೈ.ಪಾಟೀಲ್ ಮತ್ತು ಪುತ್ರ ಅರುಣಕುಮಾರ ಪಾಟೀಲ್ ಕರೆಸಿ ಒಂದು ಸಭೆ ನಡೆಸಿ ಪಕ್ಷದೊಳಗೆ ಆಗುತ್ತಿರುವ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಿ ಒಗ್ಗಟ್ಟಾಗಿ ಹೋಗುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಗುತ್ತೇದಾರ್ ತಿಳಿಸಿದರು.