Home ಜಿಲ್ಲೆ ಗುನ್ನಳ್ಳಿ: ೧೮ ರಿಂದ ವೀರಭದ್ರೇಶ್ವರ ಜಾತ್ರೆ

ಗುನ್ನಳ್ಳಿ: ೧೮ ರಿಂದ ವೀರಭದ್ರೇಶ್ವರ ಜಾತ್ರೆ

ಬೀದರ್: ಏ.೧೬:ತಾಲ್ಲೂಕಿನ ಗುನ್ನಳ್ಳಿ ಗ್ರಾಮದ ವೀರಭದ್ರೇಶ್ವರ ಮಂದಿರದ ೧೩ನೇ ಜಾತ್ರಾ ಮಹೋತ್ಸವ ಏ. ೧೮ ರಿಂದ ೨೦ ರ ವರೆಗೆ ನಡೆಯಲಿದೆ.
೧೮ ರಂದು ಸಂಜೆ ೭ಕ್ಕೆ ದೇವಸ್ಥಾನದ ಆವರಣದಲ್ಲಿ ಜಾತ್ರೆ ಉದ್ಘಾಟನೆ ಹಾಗೂ ಧರ್ಮಸಭೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸುನೀಲಕುಮಾರ ನಾಗಶೆಟ್ಟೆಪ್ಪ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ದಿವ್ಯ ಸಾನಿಧ್ಯ, ಲಾಡಗೇರಿ ಮಠದ ಗಂಗಾಧರ ಶಿವಾಚಾರ್ಯ, ಖಟಕಚಿಂಚೋಳಿಯ ಬಸವಲಿಂಗ ದೇವರು ಸಮ್ಮುಖ ವಹಿಸುವರು. ಸಂಸದ ಸಾಗರ್ ಖಂಡ್ರೆ ಉದ್ಘಾಟಿಸುವರು ಎಂದು ಹೇಳಿದ್ದಾರೆ.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕ ಅಶೋಕ ಖೇಣಿ ಹಾಗೂ ಮುಖಂಡ ಚಂದ್ರಾಸಿAಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಂಜೆ ೬ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ಜರುಗಲಿದೆ ಎಂದು ಹೇಳಿದ್ದಾರೆ.
೧೯ ರಂದು ಸಂಜೆ ೬ಕ್ಕೆ ವೀರಭದ್ರೇಶ್ವರ ರುದ್ರಾಭಿಷೇಕ, ಪಾದಪೂಜೆ, ರಾತ್ರಿ ೮ಕ್ಕೆ ಕೋಲಾಟ, ಮಹಾ ಪ್ರಸಾದ ವಿತರಣೆ ನಡೆಯಲಿದೆ. ೨೦ ರಂದು ಬೆಳಿಗ್ಗೆ ೫ಕ್ಕೆ ರುದ್ರಾಭಿಷೇಕ, ಬೆಳಿಗ್ಗೆ ೬ಕ್ಕೆ ಪಲ್ಲಕ್ಕಿ ಮೆರವಣಿಗೆ, ಬೆಳಿಗ್ಗೆ ೭ಕ್ಕೆ ಅಗ್ನಿ ಕುಂಡ ಪೂಜೆ, ಮಧ್ಯಾಹ್ನ ೧೨ಕ್ಕೆ ಮಹಾ ಪ್ರಸಾದ ವಿತರಣೆ, ಸಂಜೆ ೬.೦೧ಕ್ಕೆ ರಥೋತ್ಸವ, ರಾತ್ರಿ ೮ಕ್ಕೆ ಭಜನೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.