
ಅಫಜಲಪುರ ; ಏ.೧೬: ನಾನೇನು ಶಾಸಕ ಎಂ.ವೈ.ಪಾಟೀಲ್ ಚೇಲಾ ಅಲ್ಲ,ನಾನೊಬ್ಬ ಅವರ ಕಟ್ಟಾ ಬೆಂಬಲಿಗ ಇದ್ದೇನೆ ಅಷ್ಟೇ,ಹೀಗಾಗಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ನನ್ನ ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ ಪ್ರತಿಕ್ರಿಯೆ ನೀಡಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಹಿರಿಯ ಶಾಸಕರಾಗಿರುವ ಎಂ.ವೈ.ಪಾಟೀಲ್ ಮುನೀಮ್,ಅರುಣಕುಮಾರ ಪಾಟೀಲ್ ಮಾಲೀಕ ಆಗಿದ್ದಾರೆ ಎಂದು ಹೇಳುವುದು ಸರಿಯಿಲ್ಲ,ಹಾಗಿದ್ದರೆ ನೀವು ೬ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಆಗೊಮ್ಮೆ ಇನ್ನೊಮ್ಮೆ ಕ್ಷೇತ್ರಕ್ಕೆ ಬಂದು ಉಳಿದ ಸಂದರ್ಭದಲ್ಲಿ ಬೆಂಗಳೂರಲ್ಲೇ ಇರುತ್ತಿದ್ದಿರಿ, ಆಗ ನಿಮ್ಮ ಸಹೋದರ ನಿತಿನ್ ಗುತ್ತೇದಾರ್ ಎಲ್ಲವನ್ನು ನೋಡಿಕೊಂಡು ಹೋಗುತ್ತಿದ್ದಾಗ ಅವಾಗ ನೀವೇನು ಮುನೀಮ್ ಹಾಗಿದ್ದರೆ ಏನು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಹಿಂದುಳಿದ ಕೋಟಾದಡಿಯಲ್ಲಿ ನೀವು ಟಿಕೆಟ್ ಪಡೆದುಕೊಂಡು ಯಾವ ಹಿಂದುಳಿದ ವರ್ಗಗಳಿಗೆ ಅನ್ಯಾಯ ಕೊಡಿಸಿದ್ದೀರಿ ಹೇಳಿ ನೋಡೋಣ,ನನಗೆ ಜಿಪಂ ಸದಸ್ಯ,ಈಗ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರನ್ನಾಗಿ ಎಂ.ವೈ.ಪಾಟೀಲ್ ಮಾಡಿರುವುದರಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದೀರಿ.
ಹಿಂದುಳಿದ ಸಮುದಾಯಗಳ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಜೆ.ಎಂ.ಕೊರಬು ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದಾಗ ಅವರ ಸ್ವಂತ ಊರು ಮಾಶಾಳ ಗ್ರಾಮದ ಬಹಿರಂಗ ವೇದಿಕೆಯಲ್ಲಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ಜೈಲಿಗೆ ಹಾಕುತ್ತೇನೆ ಎಂದು ಹೇಳಿದ್ದೀರಿ,ಅಲ್ಲದೇ ಮಕ್ಬೂಲ್ ಪಟೇಲ್ ಅವರು ಜಿಪಂ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನೀವೇ ಅವರನ್ನು ಸೋಲಿಸಿದ್ದು ಮರೆತಿದ್ದೀರಿ ಕಾಣುತ್ತೆ,ದಿ.ವಿಠ್ಠಲ್ ಹೇರೂರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಎಂ.ವೈ.ಪಾಟೀಲ್ ಸ್ಪಂದಿಸಿ ಅವರನ್ನು ಉಳಿಸಿಕೊಂಡಿದ್ದಕ್ಕಾಗಿ ಕೃತಜ್ಞತೆ ಮನೋಭಾವದಿಂದ ಕಳೆದ ೨೫ ವರ್ಷಗಳಿಂದ ಅವರ ಜತೆಯಾಗಿದ್ದೇನೆ.ಹೀಗಾಗಿ ಈ ಕೂಡಲೇ ಹಿರಿಯರಾದ ಎಂ.ವೈ.ಪಾಟೀಲ್ ಅವರಿಗೆ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಫಜಲಪುರ, ಗಾಣಗಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಕಾಂಗ್ರೆಸ್ ಮುಖಂಡ ಮೈಹಿಬೂಬ ಪಟೇಲ್ ಕಲ್ಲೂರ,ಶಿವಾನಂದ ಗಾಡಿ ಸಾಹುಕಾರ,ಸಂಗನಗೌಡ ಪಾಟೀಲ್,ಶರಣು ಈಶ್ವರಗೊಂಡ, ಪ್ರವೀಣ್ ಕಲ್ಲೂರ, ದತ್ತಾತ್ರೇಯ ಮಾತನಳ್ಳಿ ಉಪಸ್ಥಿತರಿದ್ದರು.























