Home ಜಿಲ್ಲೆ ಕಲಬುರಗಿ ಮಕ್ಕಳನ್ನು ಪ್ರೀತಿಸಿ, ಆದರೆ ಒತ್ತಡ ಹೇರಬೇಡಿ: ಮನೋವಿಕಾಸ ತಜ್ಞ ಮಹೇಶ್ ಮಾಶ್ಯಾಳ್

ಮಕ್ಕಳನ್ನು ಪ್ರೀತಿಸಿ, ಆದರೆ ಒತ್ತಡ ಹೇರಬೇಡಿ: ಮನೋವಿಕಾಸ ತಜ್ಞ ಮಹೇಶ್ ಮಾಶ್ಯಾಳ್

ಕಲಬುರಗಿ,ಜು.13: ಮಕ್ಕಳನ್ನು ಪ್ರೀತಿಸಿ, ಆದರೆ ಅವರ ಮೇಲೆ ನಿಮ್ಮ ಕನಸುಗಳು ಮತ್ತು ನಿರೀಕ್ಷೆಗಳ ಭಾರವನ್ನು ಹೊರಿಸಬೇಡಿ. ಪ್ರತಿಯೊಬ್ಬಮಗುವೂ ತನ್ನದೇ ಆದ ಪ್ರತಿಭೆ, ಸಾಮಥ್ರ್ಯ ಮತ್ತು ಕನಸುಗಳನ್ನು ಹೊಂದಿರುತ್ತದೆ. ಪೆÇೀಷಕರು ಮಕ್ಕಳನ್ನು ಇತರರೊಂದಿಗೆ ಹೋಲಿಕೆಮಾಡದೆ, ಅವರ ಆಸಕ್ತಿ ಮತ್ತು ಸಾಮಥ್ರ್ಯವನ್ನು ಗುರುತಿಸಿ ಪೆÇ್ರೀತ್ಸಾಹಿಸಿದಾಗ ಮಾತ್ರ ಅವರು ಆತ್ಮವಿಶ್ವಾಸದಿಂದ ಬೆಳೆಯಲುಸಾಧ್ಯವಾಗುತ್ತದೆ” ಎಂದು ಖ್ಯಾತ ಮಾನವ ಮನೋವಿಕಾಸ ತರಬೇತುದಾರ, ಲೇಖಕ ಹಾಗೂ ವಿಸ್ತಾರ್ ಜಿಂದಗಿ ಸಂಸ್ಥೆಯ ಸಂಸ್ಥಾಪಕ-ನಿರ್ದೇಶಕ ಮಹೇಶ್ ಮಾಶ್ಯಾಳ್ ಅವರು ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ, ಜು. 12ಹಾಗೂ 13 ರಂದು ಎರಡು ದಿನಗಳ ಕಾಲ ನಡೆಯುವ ‘ಪರಿಚಯ-2026’ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಹೇಶ್ ಮಾಶ್ಯಾಳ್ ಅವರು, ಪದವಿಪೂರ್ವ ಶಿಕ್ಷಣವು ಜೀವನದಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಎರಡು ವರ್ಷಗಳು ವಿದ್ಯಾರ್ಥಿಗಳ ವ್ಯಕ್ತಿತ್ವ, ಚಿಂತನಾ ಶೈಲಿ ಮತ್ತು ವೃತ್ತಿಜೀವನದ ಭದ್ರಬುನಾದಿಯನ್ನು ನಿರ್ಮಿಸುತ್ತವೆ ಎಂದರು. ಕೇವಲ ಅಂಕಗಳಿಗಾಗಿ ಓದುವುದಕ್ಕಿಂತ ಜ್ಞಾನ ಸಂಪಾದನೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಹಾಗೂಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಹೆಚ್ಚು ಮುಖ್ಯ ಎಂದು ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲುಕಠಿಣ ಪರಿಶ್ರಮ, ಸಮಯಪಾಲನೆ, ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ ಮತ್ತು ನಿರಂತರ ಕಲಿಕೆಯ ಮನೋಭಾವ ಅತ್ಯಗತ್ಯವಾಗಿದೆ.ಪ್ರತಿದಿನ ಹೊಸದನ್ನು ಕಲಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದದೂರವಿದ್ದು, ಸಮಯವನ್ನು ಸದುಪಯೋಗಪಡಿಸಿಕೊಂಡರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆನೀಡಿದರು. ಪೆÇೀಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪ್ರೀತಿ, ವಿಶ್ವಾಸ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ನೀಡಬೇಕು.ಮಕ್ಕಳು ಯಶಸ್ಸಿಗಿಂತ ಉತ್ತಮ ಮನುಷ್ಯರಾಗುವುದು ಮುಖ್ಯ. ಕುಟುಂಬದ ಬೆಂಬಲ, ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ
ಪರಿಶ್ರಮ ಒಂದಾದಾಗ ಅತ್ಯುತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಭಾರತಿ ಇನ್‍ಸ್ಟಿಟ್ಯೂಟ್‍ನ ಪ್ರೇರಣಾದಾಯಕ ವಾಗ್ಮಿ ಹಾಗೂ ಜೀವನ ಮಾರ್ಗದರ್ಶಕರಾದ ಮೇಜರ್ ಸಿ.ಎಸ್. ಆನಂದ್
(ನಿವೃತ್ತ) ಮಾತನಾಡಿ, “ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುವುದು ಪೆÇೀಷಕರ ದೊಡ್ಡಜವಾಬ್ದಾರಿಯಾಗಿದೆ” ಎಂದು ಹೇಳಿದರು. ದೇಶಪ್ರೇಮ, ಶಿಸ್ತು, ಸಮಯಪಾಲನೆ ಮತ್ತು ಮಾನವೀಯ ಮೌಲ್ಯಗಳು ಪ್ರತಿಯೊಬ್ಬವಿದ್ಯಾರ್ಥಿಯ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ತಿಳಿಸಿದರು. ಸವಾಲುಗಳನ್ನು ಧೈರ್ಯದಿಂದ ಎದುರಿಸುವಮನೋಬಲವನ್ನು ಬೆಳೆಸಿಕೊಳ್ಳಬೇಕು. ಸೋಲಿಗೆ ಹೆದರದೆ ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು ಖಂಡಿತ ದೊರೆಯುತ್ತದೆ
ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾಲೇಜಿನ ಮೇಲ್ವಿಚಾರಕ ಡಾ. ಶ್ರೀಶೈಲ ಜಿ. ಹೊಗಾಡೆ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಸರ್ವತೋಮುಖ ಅಭಿವೃದ್ಧಿಗೆ ಕಾಲೇಜು ಬದ್ಧವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡಿ, ಸಂಸ್ಥಾಪಕ ಅಧ್ಯಕ್ಷರಾದ ಲಿಂಗೈಕ್ಯ ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಶಿಕ್ಷಣಸೇವೆಯನ್ನು ಸ್ಮರಿಸಿದರು. ವಿದ್ಯಾರ್ಥಿಗಳು ದೃಢಸಂಕಲ್ಪದಿಂದ ವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದುಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎನ್. ಎಸ್. ದೇವರಕಲ್ ಅವರ ಮಾರ್ಗದರ್ಶನದಂತೆ ನಡೆದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ರಕ್ಷಿತಾ ಮತ್ತು ವೈಷ್ಣವಿ ನಿರೂಪಿಸಿದರು. ಪೃಥ್ವಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಸಾಹನಾ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.