
ಬೀದರ್: ಮೇ.೧೨:ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾಧ್ಯಕ್ಷರಾದ ಅಮಿತ ಚಿಂಚೋಳೆ ಅವರು ಇನ್‌ಸ್ಟಾಗ್ರಾಮ್ ಮೂಲಕ ಜೀವ ಬೆದರಿಕೆ ನೀಡಿದ ವ್ಯಕ್ತಿಯ ವಿರುದ್ಧ ನೂತನ ನಗರ ಪೊಲೀಸ್ ಠಾಣೆ ಗೆ ದೂರು ಸಲ್ಲಿಸಿದ್ದಾರೆ.
“SಙಇಆಒಂಆAಓI೮೬೪” ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಅವಹೇಳನಕಾರಿ ಹಾಗೂ ಜೀವ ಬೆದರಿಕೆ ಸಂದೇಶಗಳು ಬಂದಿರುವುದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದರಿ ವ್ಯಕ್ತಿ “ಬೆಂಗಳೂರಿಗೆ ಬಾ, ನಿನ್ನನ್ನು ಸಾಯಿಸಿ ಬಿಡ್ತೀನಿ” ಎಂದು ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ಇಲಾಖೆ ತಕ್ಷಣ ತನಿಖೆ ನಡೆಸಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ತಮ್ಮ ಸುರಕ್ಷತೆಗೆ ಅಗತ್ಯ ಭದ್ರತೆ ಒದಗಿಸುವಂತೆ ಅಮಿತ ಚಿಂಚೋಳೆ ಮನವಿ ಮಾಡಿದ್ದಾರೆ.























