Home ಜಿಲ್ಲೆ ಹೆತ್ತ ತಾಯಿ ಸೇವೆಯಿಂದ ಬದುಕು ಸರ್ವಸ್ವ

ಹೆತ್ತ ತಾಯಿ ಸೇವೆಯಿಂದ ಬದುಕು ಸರ್ವಸ್ವ

ಔರಾದ್ :ಮೇ.11: ತಾಯಿಯೇ ಮೊದಲ ಗುರು ತಾಯಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪ್ರತಿಯೊಬ್ಬರು ಜನ್ಮ ನೀಡಿದ ತಾಯಿಗೆ ನೋವು ಕೊಡದಂತೆ ಒಳ್ಳೆಯ ರೀತಿಯಲ್ಲಿ ಆರೈಕೆ ಮಾಡಿದಾಗ ಮಾತ್ರ ಮಾನವನ ಬದುಕು ಸರ್ವಸ್ವವಾಗುತ್ತದೆ ಎಂದು ಜೋಜನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಸವಿತಾ ಪಾಟೀಲ್ ನುಡಿದರು.

ತಾಲೂಕಿನ ವಡಗಾಂವ(ದೇ)ದಲ್ಲಿ ರವಿವಾರ ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ ವಿಶ್ವ ತಾಯಂದಿರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಸಿಗೆ ನಿರೇರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಕಡು ಬಡತನದಲ್ಲಿ ತಾಯಿಯ ಗರಡಿಯಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಓದಿ ಕಠಿಣ ಪರಿಶ್ರಮಪಟ್ಟು ಕೆಎಎಸ್ ಅಧಿಕಾರಿಯಾಗಿ, ಮಾತೃ ಹೃದಯಿ ಮನಸ್ಸಿನಿಂದ ಗ್ರಾಮೀಣ ಭಾಗದ ತಾಯಂದಿರಿಗೆ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಎಲ್ಲರು ಅವರಂತೆ ಮುಂದೆ ದೊಡ್ಡ ಅಧಿಕಾರಿಗಳಾಗಿ ಸಮಾಜ ಕಾರ್ಯ ಮಾಡಬೇಕು ಎಂದರು.

ಸಂಪನ್ಮೂಲ ಶಿಕ್ಷಕಿ ಸಿರಾಜ್ ಬೇಗಂ ಮಾತನಾಡಿ, ತಾಯಿಯ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮಕ್ಕಳಿಗಾಗಿ ತನ್ನ ಸರ್ವಸ್ವನ್ನೇ ತೊರೆದು ಮಕ್ಕಳ ಒಳ್ಳೆಯದರಲ್ಲಿಯೇ ತನ್ನ ಒಳಿತನ್ನು ಕಂಡು ಸಂತಸ ಪಡುವ ತಾಯಿಯ ಮಹಿಮೆ ಅಪಾರವಾಗಿದೆ ಎಂದರು.

ಸಂತಪುರ ಸಿದ್ದರಾಮೇಶ್ವರ ಕಾಲೇಜಿನ ಪ್ರಾಂಸುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಪ್ರತಿವರ್ಷ ತಾಯಂದಿರಿಗೆ ಸನ್ಮಾನಿಸಿ ಅವರಿಗೆ ಗೌರವ ಸಲ್ಲಿಸುವ ಸಂಸ್ಕøತಿ ಬೆಳೆಸಿಕೊಂಡು ಬಂದಿರುವುದು ಎಲ್ಲರಿಗೂ ಆದರ್ಶವಾಗಿದೆ. ಗ್ರಾಮೀಣ ಭಾಗದ ಮಕ್ಕಳ ಸವಾರ್ಂಗೀಣ ಶಿಕ್ಷಣದ ಅಭಿವೃದ್ದಿಗೆ ಶ್ರಮಿಸುತ್ತಿರುವ ಅವರ ಸಾಮಾಜಿಕ ಕಾರ್ಯ ಎಲ್ಲರು ಮೆಚ್ಚಲೆಬೇಕಾಗುತ್ತದೆ ಎಂದರು.

ಸುಮಾರು 100ಕ್ಕಿಂತ ಹೆಚ್ಚಿನ ತಾಯಂದಿರಿಗೆ ಉಡಿತುಂಬಿ ಸೀರೆ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು. 40 ಕ್ಕೂ ಹೆಚ್ಚಿನ ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಜ್ಞಾನ ಭಾರತಿ ಪ್ರೌಢಶಾಲೆ ವಿದ್ಯಾರ್ಥಿನಿ ದಿವ್ಯ ಮಲ್ಲಪ್ಪಗೌಡ ಹಾಗೂ ಅಗ್ರ ಶ್ರೇಣಿ ಪಡೆದ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಸೀಮಾ ಬೇಗಂ, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ, ಶ್ರೀದೇವಿ ಗೌಡಾ, ಇರ್ಫಾನಾ ಬೇಗಂ, ಸುವರ್ಣ ಫೂಲೆ, ರಜೀಯಾ ಬೇಗಂ, ಡಾ. ಸಿದ್ದರೆಡ್ಡಿ , ನವೀಲಕುಮಾರ ಉತ್ಕಾರ, ಲಕ್ಷ್ಮಿಬಾಯಿ ಫೂಲೆ, ಕಲೀಮ ಉಲ್ಲಾ, ಸೆಫಿಯುಲ್ಲಾ, ಓಂಕಾರ ಮೇತ್ರೆ, ಬಬಲ್ಲೂಖಾನ್, ಇದ್ದರು. . ಪಿಡಿಒ ಚಂದ್ರಕಾಂತ ಪೂಲೆ ಸ್ವಾಗತಿಸಿದರು. ಬಸವ ಚಿಕಲಿಂಗೆ ನಿರೂಪಿಸಿದರು.