Home ಜಿಲ್ಲೆ ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪ್ರಕರಣ ವಾಪಸ್ಸು ಪಡೆಯದಿದ್ದರೆ ಕಾನೂನು ಹೋರಾಟ: ಶಶಿಕಾಂತ ಪಾಟೀಲ ಚೌಳಿ

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪ್ರಕರಣ ವಾಪಸ್ಸು ಪಡೆಯದಿದ್ದರೆ ಕಾನೂನು ಹೋರಾಟ: ಶಶಿಕಾಂತ ಪಾಟೀಲ ಚೌಳಿ

ಬೀದರ್:ಮಾ.1: ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಸುಳ್ಳು ಕೇಸ್ ದಾಖಲಿಸಿರುವ ಮಕ್ಖಳ ಆಯೋಗದ ಕ್ರಮ ಖಂಢನಿಯಾಗಿದೆ. ಈ ಮಿಥ್ಯ ಪ್ರಕರಣದ ವಿರೂದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಬೀದರ್ ಉತ್ತರ ಕ್ಷೇತ್ರದ ನಾಯಕರಾದ ಶಶಿಕಾಂತ ಪಾಟೀಲ ಚೌಳಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿನಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಮಲ್ಲಿಕಾರ್ಜುನ ಮುತ್ಯಾ ಅವರು ಕಳೆದ 15 ವರ್ಷಗಳಿಂದ ಮಕ್ಕಳ ಜೊತೆ ಸಲಿಗೆಯಿಂದ ಮಾತಾಡುವುದು, ನಗೆಸುವುದು, ಬೆನ್ನಲ್ಲಿ ಪಡೆಯುವುದು, ಆಶೀರ್ವದಿಸುವುದು ಅವೆಲ್ಲ ಮಾಮೂಲು. ಅದರಲ್ಲೂ ವಿಶೇಷವಾಗಿ ಮುತ್ಯಾ ಅವರ ಆಶೀರ್ವಾದ ಪಡೆಯಲು ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಸುತ್ತಲಿನ ರಾಜ್ಯಗಳ ಲಕ್ಷಾವಧಿ ಭಕ್ತಾದಿಗಳು ಶ್ರೀಮಠಕ್ಕೆ ಆಗಮಿಸುವರು. ಹಾಗಾಗಿ ಅವರು ಎಲ್ಲ ಮಕ್ಕಳಂತೆ ಈ ಮಗಳಿಗೂ ಆಶೀರ್ವದಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆ ಮಗಳ ಹುಟ್ಟುಹಬ್ಬ ಶ್ರೀಮಠದಲ್ಲೇ ನಡೆಯುವುದು ರೂಢಿ. ಅವರ ತಂದೆ ತಾಯಿಗಳೆ ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಿದ್ದು ನಮ್ಮ ಮಗಳಿಗೆ ಪೂಜ್ಯರು ಆಶೀರ್ವದಿಸಿದ್ದಾರೆ ಮಗ: ಜೀವನದ ಜೊತೆ ಚೆಲ್ಲಾಟವಾಡುವುದು, ಪೂಜ್ಯರಿಗೆ ಅವಮಾನಿಸುವುದು ಒಳ್ಳೆಯದಲ್ಲ. ಹಾಗಾಗಿ ಪೂಜ್ಯರದು ಏನು ತಪ್ಪಿಲ್ಲ. ನಮಗೆ ಆಶೀರ್ವದಿಸಿದ್ದಾರೆ ಎಂದು ಹೇಳಿದ ಮೇಲೂ ಮಕ್ಕಳ ಆಯೋಗವು ಪೂಜ್ಯರ ಮೇಲೆ ಎಫ್ ಐ ಆರ್ ದಾಖಲಿಸಿರುವುದು ದುರದೃಷ್ಟಕರ ಸಂಗತಿ ಎಂದು ಪಾಟೀಲ್ ಹರಿಹೈದರು.
ಟೋಕ್ರಿ ಕೋಳಿ ಸಮಾಜದ ಅಧ್ಯಕ್ಷರಾದ ಜಗನ್ನಾಥ ಜಮಾದಾರ ಮಾತನಾಡಿ, ಮಲ್ಲಿಕಾರ್ಜುನ್ ಮುತ್ಯಾ ಅವರ ಮಾತು ಯಾವತ್ತೂ ಸುಳ್ಳಾಗುವುದಿಲ್ಲ. ನಾಲ್ಕು ರಾಜ್ಯದ ಜನರ ಆಗ್ರಹವೆಂದರೆ, ಅವರ ಮೇಲಿನ ಕೇಸ್ ವಾಪಸ್ಸು ಪಡೆಯಬೇಕು. ಅವರು ವೃದ್ಧಾಶ್ರಮದಲ್ಲಿ ಹಾಗೂ ಇತರೆಡೆಗಳಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಇವರ ಏಳಿಗೆ ಸಹಿಸದ ಅವರ ಬಳಿಯೇ ಇರುವ ಪುಡಾರಿಗಳ ಒಂದು ಸಂಚಿನಿAದ ಇವತ್ತು ಪೂಜ್ಯರ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಖೇದಕರ ಸಂಗತಿಯಾಗಿದ್ದು ಈ ಕೇಸ್ ವಾಪಸ್ ಪಡೆದಿದ್ದರೆ ಇಡೀ ರಾಜ್ಯಾದ್ಯಂತ ಅವರ ಅನುಯಾಯಿಗಳು ದಂಗೆ ಹೇಳುವ ಸಾಧ್ಯತೆ ಇದೆ ಎಂದರು.
ಯುವ ಮುಖಂಡರಾದ ಮಲ್ಲಿಕನಾಥ ಮಡಗೆ, ಅರುಣ ಕೋಡಗೆ, ಸಂಗಮೇಶ ಭೂರೆ, ಡಾ.ರಾಜಶೇಖರ ಪಾಟೀಲ, ಉಮೇಶ ಹಳ್ಳಿಖೇಡೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.