Home ಜಿಲ್ಲೆ ಉಪನ್ಯಾಸ ಕಾರ್ಯಕ್ರಮ

ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಅ೯: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀಮತಿ ಕೆ ಎಸ್ ಜಿಗಳೂರ ಕಲಾ ಮಹಾವಿದ್ಯಾಲಯ ಡಾ.ಎಸ್.ಎಂ.ಶೇಷಗಿರಿ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯು.ಎ.ಸಿ.ಅಡಿಯಲ್ಲಿ ಕನ್ನಡ ವಿಭಾಗದ ವತಿಯಿಂದ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ,ದಿ.ಶ್ರೀ ಬಸವರಾಜ ಕಟ್ಟಿಮನಿ ದತ್ತಿ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವರಾಜ ಕಟ್ಟೀಮನಿಯವರ ಬದುಕು ಬರಹ ಕುರಿತು, ಧಾರವಾಡದ ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಶ್ರೀಮತಿ ವೀಣಾ ಬಿರಾದಾರ ಅವರು ಉಪನ್ಯಾಸ ನೀಡುತ್ತಾ,ಬರವಣಿಗೆಯನ್ನೇ ಉಸಿರಾಗಿಸಿಕೊಂಡ ನಾಡಿನ ಹೆಮ್ಮೆಯ ಸಾಹಿತಿ ಬಸವರಾಜ ಕಟ್ಟೀಮನಿಯವರು ,ತಮ್ಮ ಬರಹಗಳ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಪ್ರಾಮಾಣಿಕ ಪತ್ರಕರ್ತ, ಕ್ರಾಂತಿಕಾರಿ ಲೇಖಕರಾಗಿದ್ದವರು, ಕನ್ನಡದ ಅಪ್ರತಿಮ ಪ್ರಗತಿಶೀಲ ಕಾದಂಬರಿಕಾರ ರಾಗಿದ್ದರು ಎಂದು ತಿಳಿಸಿದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಹುಬ್ಬಳ್ಳಿಯ ಹಿರಿಯ ನ್ಯಾಯವಾದಿಗಳಾದ , ಶಿವಶಂಕರ.ಅAಬಲಿಯವರು ಹುರಕಡ್ಲಿ ಅಜ್ಜನವರ ಆಶೀರ್ವಾದದಿಂದ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ಇಂದು ಬೆಳೆದು ನಿಂತಿದೆ.ಎAದು ತಿಳಿಸಿದರು.. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ನೇರ ನಡೆ ನುಡಿಯ ಕಟ್ಟಿಮನಿ ಅವರ ಸಾಹಿತ್ಯ ಮೌಲಿಕವಾದುದು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರೊ ರಾಜೇಶ್ವರಿ ಎಂ ಶೆಟ್ಟರರವರು , ಕಟ್ಟಿಮನಿ ಅವರ ಬದುಕು ಎಲ್ಲರಿಗೂ ಮಾದರಿ ಎಂದರು . ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ನರೇಗಲ್ಲರವರು ಈ ದತ್ತಿ ಮುಖಾಂತರ ವಿದ್ಯಾರ್ಥಿಗಳಲ್ಲಿ ಬರೆಯುವ ಆಸಕ್ತಿ ಹೊರಹೊಮ್ಮಲಿ ಎಂದು ಹೇಳಿದರು.


ಶ್ರೀಮತಿ ಶಕುಂತಲಾ ಬಿರಾದಾರ ,ಕಟ್ಟಿಮನಿಯವರ ಜೊತೆಗಿನ ನೆನಪು ಹಂಚಿಕೊAಡರು. ವೇದಿಕೆಯ ಮೇಲೆ ದತ್ತಿ ದಾನಿಗಳಾದ ಶ್ರೀಮತಿ ಮಂಜುಳಾ ಬಿರಾದಾರ, ಶ್ರೀ ಎಸ್ ಕೆ ಹೊಸಂಗಡಿ, ಇದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಹುರಕಡ್ಲಿ ಅಜ್ಜನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.


ಡಾ.ಅಶ್ವಿನಿ ಪಾಟೀಲ ಸ್ವಾಗತಿಸಿದರು.ಶೈಲಾ.ದಾನಿ ಅತಿಥಿಗಳ ಪರಿಚಯ ಮಾಡಿದರು.ಶ್ರೀಮತಿ ಚೇತನಾ ಎಂ.ವಿ.ನಿರೂಪಿಸಿದರು.ಡಾ ದತ್ತಾ ಕಾಮಕರ ವಂದಿಸಿದರು. ಕಾರ್ಯಕ್ರಮದಲ್ಲಿ ಚಿಂತನ ಹತ್ತೀಕಾಳ,ಉಮಾಕಾಂತ ಅರ್ಕಸಾಲಿ, ಮಹೇಶ್, ಕಸ್ತೂರಿ ಅಂಗಡಿ ಭೂಸದ,ಭಾಗವಹಿಸಿದ್ದರು.