Home ಜಿಲ್ಲೆ ಕಲಬುರಗಿ ರಾಷ್ಟ್ರಮಟ್ಟದ ಓಟಕ್ಕೆ ಲಕ್ಷ್ಮೀಪುತ್ರ ಪೂಜಾರಿ ಆಯ್ಕೆ

ರಾಷ್ಟ್ರಮಟ್ಟದ ಓಟಕ್ಕೆ ಲಕ್ಷ್ಮೀಪುತ್ರ ಪೂಜಾರಿ ಆಯ್ಕೆ

ಚಿಂಚೋಳಿ: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಕ್ರೀಡಾಕೂಟದ 1500 ಮೀಟರ್ ಓಟದಲ್ಲಿ ಚಿಂಚೋಳಿ ನ್ಯಾಯಾಲಯದ ಸಿಬ್ಬಂದಿಯಾಗಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಲಕ್ಷ್ಮೀಪುತ್ರ ಪೂಜಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಪೆÇೀಲಕಪಳ್ಳಿಯ ತಾಲೂಕು ಕ್ರೀಡಾಂಗಣದಲ್ಲಿ ವಾಯುವಿಹಾರ ಹಾಗೂ ಕ್ರೀಡಾಸಕ್ತ ಮುಖಂಡರಾದ ಡಾ. ಅಜಯ ಕಾಟಪೂರ ಹಾಗೂ ಡಾ. ಶಿವಕಾಂತ ಅವರು, ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಮಂತ ಬಿ. ಕಟ್ಟಿಮನಿ ಅವರೊಂದಿಗೆ ಲಕ್ಷ್ಮೀಪುತ್ರ ಪೂಜಾರಿಯನ್ನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ರಾಜು ಚವ್ಹಾಣ, ಶಂಕರ ಕುಸಾಳೆ, ಲಕ್ಷ್ಮಣ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.