
(ಸAಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ.ನ.೧೧: ನಗರದ ಗಾಂಧಿ ಭವನದಲ್ಲಿ ನಡೆಯುತ್ತಿರುವ ಸಾವಯವ ತರಕಾರಿ, ಹಣ್ಣು, ಆಹಾರ ಧಾನ್ಯ ಮೊದಲಾದ ಉತ್ಪನ್ನಗಳ ಮಾರಾಟದ ರೈತ ಸಂತೆಗೆ ಪ್ರತಿ ವಾರದಂತೆ ಇಂದು ಸಹ ಉತ್ತಮ ಸ್ಪಂದನೆ ಗ್ರಾಹಕರಿಂದ ದೊರೆತಿದೆ.
ಕಳೆದ ಹಲವು ವಾರಗಳಿಂದ ಇಲ್ಲಿ ಪ್ರತಿ ಬುಧವಾರ ಈ ಸಂತೆ ನಡೆಯುತ್ತಿದೆ. ಬೆಳಿಗ್ಗೆ ೯ ರಿಂದಲೇ ಆರಂಭಗೊಳ್ಳುವ ಸಂತೆ ಮಧ್ಯಾಹ್ನದವರೆಗೆ ನಡೆಯುತ್ತದೆ.
ರಾಜ್ಯದ ಹಲವಡೆಗಳಿಂದ ಬರುವ ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ರೈತರಿಗೆ ಕನಿಷ್ಟ ಲಾಭದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಸಾವಯವ ಪದ್ದತಿಯಲ್ಲಿ ಬೆಳೆದ ತರಕಾರಿ ಹಣ್ಣು ಗಳಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆ ಆರಂಭಗೊಳ್ಳುತ್ತಿದ್ದAತೆ ಏಲಕ್ಕಿ ಬಾಳೆ, ಪೇರಲ ಹಣ್ಣು ಬಿಸಿ ಬಿಸಿ ಮಿರ್ಚಿಯಂತೆ ಮಾರಾಟವಾಗಿವೆ. ಅದೇರೀತಿ ಪೊಪ್ಪಾಯ, ನೆಲ್ಲಿಕಾಯಿ, ಎಳೆನೀನ ಮಾರಾಟವೂ ನಡೆದಿದೆ
ಮಾರುಕಟ್ಟೆ ಧರಕ್ಕಿಂತ ಕಡಿಮೆ:
ಮಾರುಕಟ್ಟೆಯಲ್ಲಿ ಕಿಲೋ ಏಲಕ್ಕಿ ಬಾಳೆ ೧೦೦ ರೂ ಇದ್ದರೆ. ಇಲ್ಲಿ ೮೦ ರೂ ಇದೆ. ಇನ್ನು ಎಳೆ ನೀರು ಕೇವಲ ೬೦ ರೂ ಗೆ ಏಳಬೆಂಚೆ ಗ್ರಾಮದ ರೈತ ಈಶ್ವರ ರೆಡ್ಡಿ ಮಾರಾಟ ಮಾಡುತ್ತಿದ್ದಾರೆ.
ತರಕಾರಿ ಬೆಲೆ ಟಮೋಟ. ಹಿರೇಕಾಯಿ ಮೊದಲಾದವು ಕಿಲೋಗೆ ೫೦ ರೂ ನಂತೆ. ಅಲ್ಲದೆ ಪಾಲಕ್, ಕರಿಬೇವು, ಮೆಂತೆ ಮೊದಲಾದ ಸೊಪ್ಪು ಸಹ ಇಲ್ಲಿ ದೊರೆಯಿತ್ತದೆ.
ಇನ್ನು ರೊಟ್ಟಿ, ಚಟ್ನಿ ಪುಡಿ, ಚಕ್ಕುಲಿ, ಪಿಕಲ್ಸ್ , ಅಕ್ಮೊಕಿ, ಅಡುಗೆ ಎಣ್ಣೆ ಮೊದಲಾದವುಗಳ ಮಾರಾಟವೂ ಇದೆ. ವಾರಕ್ಕೆ ಒಮ್ಮೆ ಮನೆಗೆ ಬೇಕಾದ ವಿಷಮುಕ್ತ ಉತ್ಪನ್ನಗಳನ್ನು ಜನತೆ ಖರೀದಿಸಿ ಉತ್ತಮ ಆರೋಗ್ಯಪಡೆಯಬಹುದಾಗಿದೆ.
ಖರೀದಿಗೆ ರ್ಹೊಗಬೇಕಾದಾಗ ಕೈ ಚೀಲ ತೆಗೆದುಕೊಂಡು ಹೋಗುವುದನ್ನು ಮರೆಡಯಬಾರದು.





















