Home ಜಿಲ್ಲೆ ಬೆಂಗಳೂರು ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್

ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್

ಕೋಲಾರ,ಮಾ.೪- ಕೋಲಾರ ತಾಲೂಕು ವೇಮಗಲ್ ಹೋಬಳಿ ಮದ್ದೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕದರೀಪುರದಲ್ಲಿ ಶ್ರೀ ಯೋಗನರಸಿಂಹ ಸ್ವಾಮಿ ಜಾತ್ರೆ ಅಂಗವಾಗಿ ೨ನೇ ವರ್ಷದ ಕೆಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಸೀತಿ ಹೊಸೂರು ಮುರಳಿಗೌಡ ಪ್ರಾಯೋಜಕತ್ವದಲ್ಲಿ ಇಂದು ಮತ್ತು ನಾಳೆ ಸೇರಿದಂತೆ ೨ ದಿನಗಳ ಕಾಲ ಆಯೋಜನೆ ಮಾಡಲಾಗಿದೆ.


ಈ ವೇಳೆ ಸಮಾಜ ಸೇವಕ ಸೀತಿ ಹೊಸೂರು ಮುರಳಿ ಗೌಡ ದೇವರ ದರ್ಶನ ಪಡೆದು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು. ಕದರೀಪುರದಲ್ಲಿ ನಡೆಯುವ ಕ್ರಿಕೆಟ್ ಟೂರ್ನಮೆಂಟ್ ಹೋಬಳಿ ಮಟ್ಟದಲ್ಲಿ ನಡಯಲಿದ್ದು ತಾಲೂಕು, ಜಿಲ್ಲೆ, ರಾಜ್ಯ, ಅಂತರಾಜ್ಯ, ರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡು ಬೆಳೆಯಬೇಕು ಹಾಗಾಗಿ ಪ್ರತಿಯೊಬ್ಬರು ಕಾನೂನಿನ ಅಪರಾಧವಾಗಿರುವ ಜೂಜಾಟಗಳಲ್ಲಿ ಭಾಗಿಯಾಗಿ ತಮ್ಮ ಭವಿಷ್ಯ ಮತ್ತು ಕುಟುಂಬಗಳನ್ನು ನಾಶಮಾಡಿಕೊಳ್ಳದೆ ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್, ಕ್ರಿಕೆಟ್, ಕಬ್ಬಡಿ, ಖೋಖೋ ಇ ತರಹದ ಕ್ರೀಡೆಯಲ್ಲಿ ಭಾಗಿಯಾಗಿ ಗೆಲುವಿನ ಹಾದಿಯಲ್ಲಿ ಸಾಗಿ ಹೆಸರು ಗುರುತಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಯುವಕರಿಗೆ ಕಿವಿ ಮಾತು ಹೇಳಿದರು.


ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಡಿ.ವಿ ಶ್ರೀನಿವಾಸ್, ಯುವ ಮುಖಂಡರಾದ ಇ.ಕೆ ಚಂದ್ರಶೇಖರ್, ಇ.ಎಚ್ ಆನಂದ್ ಕುಮಾರ್, ದೇವರಾಜ್, ಕೆ ಎಂ ಮೂರ್ತಿ, ಮನೋಹರ್ ಮತ್ತು ಯುವಕರು ಇದ್ದರು.