
ಕೆಜಿಎಫ್. ಮೇ. ೧೩- ತಾಲ್ಲೂಕಿನ ಆಡಳಿತವು ಹಳಿ ತಪ್ಪಿದ ರೈಲಿನಂತೆ ಆಗಿದ್ದು ತಾಲ್ಲೂಕಿನ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಚಾರ ತುಂಬಿ ತುಳುಕುತ್ತಿದೆ ಎಂದು ಆರ್. ಕೆ. ಪೌಂಡೇಷನ್ ಅಧ್ಯಕ್ಷ ಮೋಹನ್ ಕೃಷ್ಣ ಆರೋಪಿಸಿದರು.
ಕೊರಮಂಡಲ್ ಮಾಡಲ್ ಹೌಸ್ ಬಡಾವಣೆ ಯಲ್ಲಿ ರುವ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅರಕೆ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಮೋಹನ್ ಕೃಷ್ಣ ಕಂದಾಯ ಇಲಾಖೆಯಲ್ಲಿ ಬಡವರು ತಮ್ಮ ಕೆಲಸಗಳಿಗೆ ಹೋದರೆ ಹಣವಿಲ್ಲದೆ ಕನಿಷ್ಠ ಪಕ್ಷ ಜಾತಿ,ಆದಾಯ ಪ್ರಮಾಣ ಪತ್ರ ಗಳಿಗೂ ಲಂಚ ನೀಡಬೇಕಾದ ಪರಿಸ್ಥಿತಿ ಇದ್ದಾರೆ, ನಗರಸಭೆ ಕಚೇರಿಯಲ್ಲಿ ಕಡತಗಳಿಗೆ ಸೀಲ್ ಹಾಕಿಸುವುದರಿಂದ ಹಿಡಿದು ಉಳಿದ ಎಲ್ಲಾ ಸಿಬ್ಬಂದಿಗಳ ಕೈ ಬೆಚ್ಚಗೆ ಮಾಡದಿದ್ದರೆ ಕಡತಗಳು ಕಸದ ಬುಟ್ಟಿಗೆ ಎಸೆಯುತ್ತಾರೆ ಇನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿಯನ್ನು ಕೇಳುವುದೇ ಬೇಡ ಸಾರ್ವಜನಿಕರ ಆಸ್ಪತ್ರೆ ಬಡವರಿಗೆ ಕೈಗೆಟುಕದ ಆಸ್ಪತ್ರೆಯಾಗಿದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದರೆ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಹೋಗಿ ಎಂದು ಸಾಗ ಹಾಕುತ್ತಾರೆ ಹಾಗೇ ಲೋಕೋಪಯೋಗಿ ಇಲಾಖೆಯವತಿಯಿಂದ ಮಾಡಲಾಗಿರುವ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ರಸ್ತೆ ಮೇಲಿರುವ ಕಾರುಗಳು ಕಿತ್ತು ಬರುತ್ತಿದೆ ಇದು ಶಾಸಕಿ ರೂಪಶಶಿಧರ್ ರವರ ಸಾಧನೆಯಾಗಿದೆ.
ಶಾಸಕಿ ರೂಪಶಶಿಧರ್ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ ಎಲ್ಲವೂ ಬ್ಯಾಲಹಳ್ಳಿ ಗೋವಿಂದೇಗೌಡ ಅವರೇ ಮುಖಂಡರಾದ ಶಿವ ನಾಗೇಶ್ ನಿಯಂತ್ರಿಸುತಿದ್ದಾರೆ ಸಣ್ಣ ಒಂದು ಕೆಲಸ ಆಗಬೇಕಾದರೂ ಸಹ ಕೋಲಾರಕ್ಕೆ ಹೋಗಬೇಕಾದ ಪರಿಸ್ಥಿತಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ ಆದ್ದರಿಂದ ಕ್ಷೇತ್ರದ ಜನತೆ ಸಮಯಕ್ಕಾಗಿ ಕಾಯುತ್ತಿದ್ದು ಚುನಾವಣೆ ಬಂದರೆ ಮೌನವಾಗಿ ಮತಗಳ ಮೂಲಕ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದರು. ಈ ವೇಳೆ ಮುಖಂಡರಾದ ಶಿವ ನಾಗೇಶ್ ನಾಮದೇವ್ ಕೃಷ್ಣಪ್ಪ ಹಾಗೂ ಇತರರು ಹಾಜರಿದ್ದರು.


























