Home ಜಿಲ್ಲೆ ಬೆಂಗಳೂರು ಪುರಸಭೆಯಲ್ಲಿ ಕನ್ನಡ ರಾಜ್ಯೋತ್ಸವ: ಸಡಗರ-ಸಂಭ್ರಮ

ಪುರಸಭೆಯಲ್ಲಿ ಕನ್ನಡ ರಾಜ್ಯೋತ್ಸವ: ಸಡಗರ-ಸಂಭ್ರಮ

filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 4437; AI_Scene: (-1, -1); aec_lux: 319.0; aec_lux_index: 0; hist255: 0.0; hist252~255: 0.0; hist0~15: 0.0; motionLevel: 0; weatherinfo: null; temperature: 34;

ವಿಜಯಪುರ, ನ. ೨- ವಿಜಯಪುರ ಪಟ್ಟಣದ ಪುರಸಭೆಯ ಆವರಣದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಭುವನೇಶ್ವರಿ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿದರು. ನಾಡಗೀತೆ, ರೈತಗೀತೆ ಹಾಗೂ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ರಾಜ್ಯೋತ್ಸವ ಆಚರಣೆ ಮಾಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುರಸಭೆಗೆ ಹಳದಿ, ಕೆಂಪು ಬಣ್ಣದಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.


ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿ, ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು, ಸಂತರು, ದಾಸರು-ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡನಾಡು ಎಂಬ ಹೆಸರಿಗೆ ಒಂದು ಅದ್ಭುತವಾದ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ನ. ೧ ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ಆಚರಣೆ ಕೇವಲ ೧ ದಿನಕ್ಕೆ ಸೀಮಿತವಾಗಬಾರದು. ಇದು ನಿತ್ಯೋತ್ಸವವಾಗಬೇಕು ಎಂದರು.


ಪುರಸಭೆ ಅಧಿಕಾರಿಗಳಾದ ಬಾಲಚಂದ್ರ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಶಿವನಾಗೇಗೌಡ, ಪೃಥ್ವಿ, ರೂಪ, ವೆಂಕಟರತ್ನಮ್ಮ, ಜನಾರ್ಧನ, ಅಜ್ಮಥ್, ಪೂರ್ಣಿಮಾ, ಹೇಮಾವತಿ, ಸಹನಾ, ಶಾರದಮ್ಮ, ಮಂಜುನಾಥ್, ರವಿಕುಮಾರ್ ಮುಂತಾದವರು ಹಾಜರಿದ್ದರು.