Home ಮುಖಪುಟ ಸುದ್ದಿ ಜೂ. ೨೧ ಹರಿಪ್ರಸಾದ್ ಪದಗ್ರಹಣ

ಜೂ. ೨೧ ಹರಿಪ್ರಸಾದ್ ಪದಗ್ರಹಣ

ಬೆಂಗಳೂರು, ಜೂ. ೧೦- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ.ಹರಿಪ್ರಸಾದ್ ಅವರು ಈ ತಿಂಗಳ ೨೧ ರಂದು ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ


ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕೆಪಿಸಿಸಿಯ ನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಕೇಂದ್ರ ಮಟ್ಟದ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.


ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಂಖಡರ ಸಮ್ಮುಖದಲ್ಲಿ ಹರಿಪ್ರಸಾದ್ ಕೆಪಿಸಿಸಿ ಸಾರಥಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.


೨೦೨೩ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಈಗ ಮುಖ್ಯಮಂತ್ರಿಯಾದ ನಂತರ ಪಕ್ಷದ ಅಧ್ಯಕ್ಷತೆಯ್ನು ಬಿಟ್ಟುಕೊಟ್ಟಿದ್ದಾರೆ. ಹೈಕಮಾಂಡ್ ಹರಿಪ್ರಸಾದ್ ಅವರಿಗ ಪಕ್ಷದ ಸಾರಥ್ಯ ವಹಿಸಿದೆ. ಕಾರ್ಯಕರ್ತರೊಬ್ಬರಿಗೆ ಪಕ್ಷದ ನಾಯಕತ್ವ ವಹಿಸಿರುವ ವರಿಷ್ಠರಿಗೆ ಜಿ.ಸಿ ಚಂದ್ರಶೇಖರ್ ಧನ್ಯವಾದ ಹೇಳಿದರು.


ಪಕ್ಷದಲ್ಲಿ ಯಾವುದೇ ಗಾಡ್ ಫಾದರ್‌ಗಳಿಲ್ಲದೆ ಹರಿಪ್ರಸಾದ್ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ರಾಜ್ಯಸಭಾ ಸದಸ್ಯರಾಗಿ, ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ, ೧೯ ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಬೆಳೆದವರು ಬಹಳ ಸರಳ ನಾಯಕ ಎಂದರು


ಮುಂದೆ ನಮಗೆ ಚುನಾವಣಾ ಪರ್ವ ಇದೆ. ಜಿಬಿಎ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹರಿಪ್ರಸಾದ್ ಅವರ ನಾಯಕತ್ವದಲ್ಲಿ ನಾವೆಲ್ಲಾ ಚುನಾವಣೆಎ ಎದುರಿಸಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ೨೦೨೮ ರಲ್ಲಿ ವಿಧಾನಸಭೆ ಮತ್ತು ೨೦೨೯ರ ಲೋಕಸಭೆ ಚುನಾವಣೆಗಳಲ್ಲಿ ಈ ಮೂವರು ನಾಯಕರ ನಾಯಕತ್ವದಲ್ಲಿ ನಾವೆಲ್ಲಾ ಚುನಾವಣೆಯನ್ನು ಗೆಲ್ಲುವ ಕೆಲಸ ಮಾಡೋಣ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಅವರು ಪಕ್ಷದ ಕಚೇರಿಯಲ್ಲೇ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು. ಆದರೆ ಪಕ್ಷ ಅರಮನೆ ಮೈದಾನದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಲು ತೀರ್ಮಾನಿಸಿತು ಎಂದು ಅವರು ಹೇಳಿದರು


ಹರಿಪ್ರಸಾದ್ ಅವರು ಮಂತ್ರಿ ಸ್ಥಾನ ಬಿಟ್ಚು ಪಕ್ಷದ ಅಧ್ಯಕ್ಷತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಂದ ನಾವೆಲ್ಲಾ ಕಲಿಯಬೇಕಾಗಿರುವುದು ಬಹಳ ಇದೆ ಎಂದು ತಿಳಿಸಿದರು

ಅದ್ದೂರಿ ಸ್ವಾಗತ


ಕೆಪಿಸಿಸಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಆಗಮಿಸಿದ ಹರಿಪ್ರಸಾದ್ ಅವರನ್ನು ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಕಾರ್ಯಾಧ್ಯಕ್ಷ ಜಿ.ವಿ. ಚಂದ್ರಶೇಖರ್, ಮಂಜುನಾಥ ಭಂಡಾರಿ ಸೇರಿದಂತೆ ಹಲವು ನಾಯಕರುಗಳು ಹರಿಪ್ರಸಾದ್ ಅವರಿಗೆ ಪುಷ್ಪಗುಚ್ಛ ನೀಡಿ ಪಕ್ಷದ ಕಚೇರಿಗೆ ಬರಮಾಡಿಕೊಂಡರು.


ಪಕ್ಷದ ಕಚೇರಿಗೆ ಆಗಮಿಸಿದ ಅವರು, ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಹೇಳಿ, ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರ ಜತೆ ಸಭೆ ನಡೆಸಿ ಚರ್ಚಿಸಿದರು.


ಇಂದು ಪಕ್ಷದ ಕಚೇರಿಗೆ ಆಹ್ವಾನ ನೀಡಿದ್ದೇನೆ. ಸುದ್ದಿಗೋಷ್ಠಿಯನ್ನು ಮುಂದೆ ನಡೆಸುತ್ತನೆ. ಸದಸ್ಯ ಎಲಲ್ರಿಗ೫ ಧನ್ಯವಾದ ಎಂದು ಹರಿಪ್ರಾಸದ್ ಹೇಳಿ, ಮಧ್ಯಪ್ರದೇಶದಲ್ಲಿ ಮೀನಾಕ್ಷಿನಟರಾಜ್ ಅವರ ರಾಜ್ಯಸಭಾ ನಾಮಪತ್ರ ಸಲ್ಲಿಕೆ ತಿರಸ್ಕಾರವಾಗಿರುವ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿಯವರು ವೋಚ್ ಚೋರಿ ಜತೆ ಸೀಟ್ ಚೋರಿಯನ್ನು ಮಾಡುತ್ತಿದ್ದಾರೆ. ಇದೆಲ್ಲಾ ನಮಗೆ ಹೊಸದಲ್ಲ ಎಲ್ಲವನ್ನು ನಾವು ಎದುರಿಸುತ್ತೆ ಎಂದು ಹೇಳಿ ಬಿಜೆಪಿ ನಡೆಯನ್ನು ಖಂಡಿಸಿದರು.