Home ಜಿಲ್ಲೆ ಯೋಗ ದಿನಾಚರಣೆಯ ಅಗತ್ಯ ಸಿದ್ಧತೆಗೆ ಸೂಚನೆ

ಯೋಗ ದಿನಾಚರಣೆಯ ಅಗತ್ಯ ಸಿದ್ಧತೆಗೆ ಸೂಚನೆ

ಧಾರವಾಡ, ಜೂ.೧೦: ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಜೂನ್ ೨೧ ರಂದು ಬೆಳಿಗ್ಗೆ ೬.೪೫ ಗಂಟೆಗೆ ೧೨ ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗುವುದು. ಒಂದು ಸಾವಿರ ಯೋಗಾಪಟುಗಳು ಭಾಗವಹಿಸುವರು. ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನಿರ್ದೇಶಿಸಿದರು.


ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.


ಯೋಗವನ್ನು ಕೇವಲ ಒಂದೇ ದಿನಕ್ಕೆ ಸೀಮಿತಗೊಳಿಸದೇ ಪ್ರತಿದಿನ ಯೋಗಾಸನಗಳನ್ನು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯ ರಕ್ಷಣೆಗೆ ಯೋಗ ಅತ್ಯುತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ನಗರದ ಯೋಗ ಫೆಡರೇಷನ್, ಯೋಗ ಒಕ್ಕೂಟ, ಯೋಗ ತರಬೇತಿ ಸಂಸ್ಥೆ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಶಾಲಾ ಕಾಲೇಜುಗಳಿಂದ ಜನರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ತಿಳಿಸಿದರು.


ಯೋಗ ನಡೆಯುವ ಸ್ಥಳದಲ್ಲಿ ಆಂಬುಲೆನ್ಸ್, ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಹಾನಗರ ಪಾಲಿಕೆಯಿಂದ ಸ್ವಚ್ಚತೆ ಹಾಗೂ ನೀರಿನ ವ್ಯವಸ್ಥೆ ಹಾಗೂ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ತಿಳಿಸಿದರು.


ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಯವರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ತಮಗೆ ಅನುಕೂಲಕರವಾದ ಸಮಯದಲ್ಲಿ ಆನ್‌ಲೈನ್ ಮೂಲಕ ಯೋಗ ತರಬೇತಿಯನ್ನು ಪಡೆಯಬಹುದು. ಆನ್‌ಲೈನ್ ವೆಬ್‌ಸೈಟ್ ಮೂಲಕ ಯೋಗ ತರಬೇತಿಗೆ ನೋಂದಾಯಿಸಿಕೊAಡು ಯೋಗಾಭ್ಯಾಸ ಮಾಡಬಹುದು ಎಂದು ಅವರು ಹೇಳಿದರು.

ಜಿಲ್ಲೆಯ ಎಲ್ಲ ಆಯುಷ್ ವೈದ್ಯಾಧಿಕಾರಿಗಳು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗ ತರಬೇತಿದಾರರ ಸಹಕಾರದೊಂದಿಗೆ ನಿತ್ಯ ಯೋಗಾಭ್ಯಾಸದ ಆನ್‌ಲೈನ್ ತರಗತಿಗಳನ್ನು ಜೂನ್ ೨೨, ೨೦೨೬ ರಿಂದ ಜೂನ್ ೨೧, ೨೦೨೭ ರವರೆಗೆ ಒಂದು ವರ್ಷದ ಅವಧಿಗೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.


ಎಲ್ಲ ಆಯುಷ್ ವೈದ್ಯಾಧಿಕಾರಿಗಳು ತಮ್ಮ ಚಿಕಿತ್ಸಾಲಯ ಆಸ್ಪತ್ರೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು, ಐಟಿ ಉದ್ಯೋಗಿಗಳಿಗೆ, ಯುವಜನತೆಗೆ ಹಾಗೂ ವೃತ್ತಿಪರರಿಗೆ ಯೋಗವನ್ನು ತಲುಪಿಸುವ ದೃಷ್ಠಿಯಿಂದ ವಾಯ್-ಬ್ರೇಕ್ (ಙ-ಃಡಿeಚಿಞ) ಎಂಬ ಆ್ಯಪ್‌ನ್ನು ಡೌನಲೋಡ್ ಮಾಡಿಕೊಂಡು ಯೋಗವನ್ನು ಅನುಸರಿಸಲು ಪ್ರೇರೇಪಿಸಬೇಕೆಂದು ಅವರು ಸೂಚಿಸಿದರು.


ಸಭೆಯಲ್ಲಿ ವೈಧಾಧಿಕಾರಿ ಡಾ.ಶಶಿಧರ ತಳಕಲ್ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.


ಸಭೆಯಲ್ಲಿ ಡಿಸಿಪಿ ರವೀಶ ಸಿ.ಆರ್., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಣೇಶ ಕಬಾಡೆ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಯುಷ್ ಕಾಲೇಜುಗಳ ಮುಖ್ಯಸ್ಥರು, ಕೆ.ಎಂ.ಎಫ್ ಅಧಿಕಾರಿಗಳು, ಪತಂಜಲಿ ಯೋಗ ಸಮಿತಿ, ಎನ್.ಎಸ್.ಎಸ್ ಹಾಗೂ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.