Home ಜಿಲ್ಲೆ ಕಲಾವಿದರನ್ನು ಪ್ರೋತ್ಸಾಹಿಸುವುದು ಉತ್ತಮ ಕಾರ್ಯ

ಕಲಾವಿದರನ್ನು ಪ್ರೋತ್ಸಾಹಿಸುವುದು ಉತ್ತಮ ಕಾರ್ಯ

ಸೈದಾಪುರ:ಮೇ.10:ಬಡತನದ ನಡುವೆಯೂ ಅದ್ಭುತ ಶಿಲ್ಪಕಲೆಗಳನ್ನು ಕೆತ್ತಿ, ಕಲೆಗೆ ಜೀವ ತುಂಬುತ್ತಿರುವ ಕಿಲ್ಲನಕೇರಾ ಗ್ರಾಮದ ಮರೆಪ್ಪ ಬಾವೂರ ಶಿಲ್ಪಿ ಅವರಿಗೆ ಸನ್ಮಾನಿಸುವುದು ಕಲೆ ಮತ್ತು ಕಲಾವಿದರನ್ನು ಪೆÇ್ರೀತ್ಸಾಹಿಸುವ ಉತ್ತಮ ಕಾರ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಅವರು ಅಭಿಪ್ರಾಯಪಟ್ಟರು.
ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿನ ಶಿವಾಜಿ ಮೂರ್ತಿಗೆ ಪೂಜೆ ನೆರವೇರಿಸಿ ಆನಂತರ ಶಿಲ್ಪ ಕಲಾವಿದ ಮರೆಪ್ಪ ಬಾವೂರ ಇವರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಗ್ರಾಮೀಣ ಕಲೆ ಮತ್ತು ಶಿಲ್ಪಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವನ್ನು ಮರೆಪ್ಪ ಶಿಲ್ಪಿಯವರು ಮಾಡುತ್ತಿದ್ದಾರೆ. ಹಗಲಿರುಳು ಶ್ರಮಿಸಿ ಕಲಾಕೃತಿಗಳನ್ನು ರೂಪಿಸುವ ಶಿಲ್ಪಿಯ ಕೌಶಲ್ಯವನ್ನು ಗುರುತಿಸಿ ಕಲಾವಿದನಿಗೆ ಆರ್ಥಿಕ ಅಥವಾ ನೈತಿಕ ಬೆಂಬಲವನ್ನು ಜಿಲ್ಲಾಡಳಿತ ಮಾಡಬೇಕಾಗಿದೆ ಎಂದರು. ಕಿಲ್ಲನಕೇರಾ ಗ್ರಾಮದ ಯುವ ಶಿಲ್ಪಿಯೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಸಮಕಾಲೀನ ಜನಪರ ಮರ ಕೆತ್ತನೆ ಶಿಲ್ಪ ಶಿಬಿರದಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರಿನ ಸಹಯೋಗದಲ್ಲಿ ಕಬ್ಬನ್ ಪಾರ್ಕ್ ನಲ್ಲಿ ನಡೆದ ಹೂಗಳ ಹಬ್ಬ 2025- ಕಲೆ ಸಂಸ್ಕೃತಿಯ ಸಮಾಗಮ ಶಿಲ್ಪ ಕಲಾ ಅಕಾಡೆಮಿಯಲ್ಲಿ ಭಾಗವಹಿಸಿ ಪ್ರಶಂಸನಾ ಪತ್ರ ಪಡೆದಿದ್ದಾರೆ. ಹೀಗೆ ಹಲವು ಶಿಲ್ಪಕಲೆಯ ಶಿಬಿರಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಕೀರ್ತಿ ತರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡೇವಿಡ್ ಸ್ಯಾಮಿಲ್, ಜಗದೀಶ ಹಿರೇಮಠ, ರಫಿಕ್ ಪಟೇಲ್, ಆಂಜನೇಯ, ಮಚ್ಚೆ ಬನ್ನಪ್ಪ ಬಾವೂರ, ಬನ್ನಪ್ಪ ಮಸಾಲಿ, ಮರೆಪ್ಪ ಉಪ್ಪಾರ್, ಬಸವರಾಜ ಆನಂಪಲ್ಲಿ, ಯಂಕಪ್ಪ ಬಾವೂರ ಹೊಸಮನಿ, ಬೀರಲಿಂಗಪ್ಪ ಎದ್ದೇರಿ, ಜಮ್ಸೆಪ್ಪ ಬಡಿಗೇರಾ, ಇಬ್ರಾಹಿಂ ಫೈಲ್, ಸಾಬರೆಡ್ಡಿ ಹೊಸಳ್ಳಿ, ಲಕ್ಷ್ಮಣ ಆನಂಪಲ್ಲಿ, ಬಸವರಾಜ ಬಾವೂರ, ತಾಯಪ್ಪ ಬಾವೂರ ಸೇರಿದಂತೆ ಇತರರಿದ್ದರು.