
ಸೈದಾಪುರ:ಎ.೧:ಪ್ರೌಢ ಶಾಲೆಯಲ್ಲಿ ಸಹಪಾಠಿಯಾದ ಬಸವರಾಜ ಐರೆಡ್ಡಿ ಶಿಸ್ತು, ಪ್ರಾಮಾಣಿಕತೆ ಸೇರಿದಂತೆ ಸಮಸ್ಯೆಯನ್ನು ಸರಳವಾಗಿ ಕಂಡು ಕೊಳ್ಳುವ ಸೇವಾ ಮನೋಭಾನವೆಯೊಂದಿಗೆ ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿದ್ದೂ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ ಎಂದು ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಸಿದ್ದಪ್ಪ ಆವಂಟಿ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲಾ ಪಂಚಾಯತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಿ ಇಲಾಖೆಯ ಕಾರ್ಯಪಾಲಕರ ಅಭಿಯಂತರ ಕಛೇರಿ ವತಿಯಿಂದ ಹಮ್ಮಿಕೊಂಡ ಪ್ರಭಾರಿ ಕಾರ್ಯಪಾಲಕ ಅಭಿಯಂತರರ ಬಸವರಾಜ ಐರೆಡ್ಡಿ ಅವರ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಸೈದಾಪುರ ಆತ್ಮೀಯರ ಬಳಗದ ವತಿಯಿಂದ ಸನ್ಮಾನಿಸಿ ಮಾತನಾಡಿದರು. ನಮ್ಮ ಸಹಪಾಠಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ತಮ್ಮ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಶ್ರೇಯಸ್ಸು ಐರೆಡ್ಡಿ ಅವರಿಗೆ ಸಲ್ಲುತ್ತದೆ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ದೇಸಾಯಿ, ನರಸಿಂಹಲು ಕಲಕೊಂಡ, ಅಶೋಕ ಗುಮಡಾಲ, ಸಿದ್ದಪ್ಪ ಆವಂಟಿ, ಸೈಯದ ಶೇರಅಲಿ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಇತರರಿದ್ದರು.
ನನ್ನ ಬಾಲ್ಯ ಸ್ನೇಹಿತರಿಂದ ಸನ್ಮಾನಿತರಾಗುತ್ತಿರುವುದು ಸಂತಸವನ್ನುAಟು ಮಾಡಿದೆ. ನನ್ನ ವೃತ್ತಿ ಜೀವನದಲ್ಲಿ ಹಾಗೂ ವೈಯಿಕ್ತಿಕ ಬದುಕಿನಲ್ಲಿ ಇವರ ಸಹಕಾರ ತುಂಬಾ ಇದೆ. ಇಲಾಖೆಯ ವತಿಯಿಂದ ಆಯೋಜನೆ ಮಾಡಲಾದ ಕಾರ್ಯಕ್ರಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿರುವುದು ನನ್ನ ನಿವೃತ್ತಿಯ ಬದುಕಿಗೆ ಮಹತ್ವ ಬಂದಾAತಾಗಿದೆ.
ಬಸವರಾಜ ಐರಡ್ಡಿ ವಯೋನಿವೃತ್ತಾ ಪ್ರಭಾರಿ ಕಾರ್ಯಪಾಲಕ ಅಭಿಯಂತರರು ಯಾದಗಿರಿ






















