
ಕೋಲಾರ,ಮೇ,೧೧- ಜೂನ್ ಮಾಹೆಯಿಂದ ಬಿ.ಪಿ.ಎಲ್. ಪಡಿತರ ಚೀಟಿಗಳಿಗೆ ಇಂದಿರಾ ಕಟ್ ವಿತರಿಸಲು ಸಕಲ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹಚ್.ಮುನಿಯಪ್ಪ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ ಈಗಾಗಲೇ ಇಂದಿರಾ ಕಿಟ್ ವಿತರಿಸ ಬೇಕಾಗಿತ್ತು ಅದರೆ ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗಿ ವಿಫಲವಾಗಿದ್ದು ಮುಂದಿನ ತಿಂಗಳಿಂದ ನೀಡಲಾಗುವುದು.
೨೦೨೬ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಘೋಷಿಸಲಾಗಿರುವ ಬಿಪಿಎಲ್ ಪಡಿತರದಾರರಿಗೆ ೫ ಕೆ.ಜಿ. ಅಕ್ಕಿಯ ಬದಲಿಗೆ ಇಂದಿರಾ ಕಿಟ್ ಯೋಜನೆಯಡಿ ಪೌಷ್ಟಿಕ ಆಹಾರ ಪದಾರ್ಥಗಳಾದ ತೊಗರಿಬೇಳೆ, ಹೆಸರು ಕಾಳು, ಎಣ್ಣೆ, ಸಕ್ಕರೆ, ಉಪ್ಪು ವಿತರಿಸಲಾಗುವುದು ಇದಕ್ಕೆ ಯಾವೂದೇ ರೀತಿ ಹಣ ಪಾವತಿಸುವಂತಿಲ್ಲ ಎಂದರು.
ಇದರ ಜೂತೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಸೇರ್ಪಡೆ ಹಾಗೂ ತೆಗೆದು ಹಾಕಲುಸಂಪುಟ ಪುನಾರಚನೆ ಅವಕಾಶ ನೀಡಿರುವುದನ್ನು ಪ್ರಮಾಣಿಕತೆಯಿಂದ ಸದ್ವಳಿಸಿ ಕೊಳ್ಳಬೇಕು. ಯಾವೂದೇ ರೀತಿ ದುರ್‍ಬಳಕೆ ಮಾಡಿ ಕೊಂಡಲ್ಲಿ ಕಾನೂನು ಬದ್ದವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಬಡ ಕುಟುಂಬಗಳಿಗೆ ಅಗತ್ಯವಾದ ಪೌಷ್ಠಿಕಾಂಶ ಒದಗಿಸುವುದು ಮತ್ತು ಹೆಚ್ಚುವರಿಯಾಗಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟುವ ದೆಸೆಯಲ್ಲಿ ೪,೫೪ ಕೋಟಿ ಜನತೆಗೆ ರೂ ೧೭.೧೬೭ ಕೋಟಿ ರೂ ವೆಚ್ಚದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಸಂಪುಟ ಪುನಾರಚನೆ ,ನಾಯಕತ್ವ ಬದಲಾವಣೆ ವಿಚಾರವಾಗಿ ಇನ್ನೊಂದು ತಿಂಗಳಲ್ಲಿ ಬಗೆಹರಿಯುವ ಸಾಧ್ಯತೆಗಳಿದೆ. ಇವುಗಳು ಏನಿದ್ದರೂ ಕಾಂಗ್ರೇಸ್ ಪಕ್ಷದ ಹೈ ಕಮಾಂಡ್ ತೀರ್ಮಾನಕ್ಕೆ ಬಿಟ್ಟಿರುವ ವಿಚಾರವಾಗಿದೆ. ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರುಗಳೇ ಮುಂದುವರೆಯುತ್ತಾರಾ ಅಥವಾ ಬದಲಾಗುತ್ತಾರ ಎಂಬುವುದನ್ನು ಹೈ ಕಮಾಂಡ್ ಸಮಿತಿ ತೀರ್ಮಾನಿಸಲಾಗುವುದು ಎಂದು ಸ್ವಷ್ಟಪಡಿಸಿದರು.
ಎಸ್.ಐ.ಆರ್. ವಿಚಾರವು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡಿ ದೇಶದಲ್ಲಿ ಗೊಂದಲ ಇದೆ. ಇದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಮತಪಟ್ಟಿಗಳ ಪರಿಷ್ಕರಣೆ ಅಗ ಬೇಕೆಂಬುವುದಕ್ಕೆ ವಿರೋಧವಿಲ್ಲ. ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಿರ್ವಹಿಸ ಬೇಕು. ನಾಗರೀಕ ಮತದಾರರ ಹಿತದೃಷ್ಠಿಯಿಂದ ಮತ ಕಾಪಾಡುವಂತ ಜನಾದೇಶಕ್ಕೆ ಹೆಚ್ಚಿನ ಗೌರವ ನೀಡಿ ಪ್ರಮಾಣಿಕವಾಗಿ ಕೆಲಸ ಬೇಕಾಗಿದೆ ಎಂದು ತಿಳಿಸಿದರು.
ಸಿಲಿಂಡರ್ ಸರಬರಾಜು ವಿಚಾರವಾಗಿ ಸ್ವಲ್ಪ ಸಮಸ್ಯೆ ಇದ್ದು ಕೇಂದ್ರ ಸರ್ಕಾರವು ಬಗೆಹರಿಸುವ ಪ್ರಯತ್ನದಲ್ಲಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಮಾತ್ರ ಸಮಸ್ಯೆ ಇದ್ದು ಗೃಹ ಬಳಕೆಯ ಸಮಸ್ಯೆಗಳು ಬಗೆ ಹರಿದಿದೆ. ಸರ್ಕಾರದ ಯಾವೂದೇ ಸೌಲಭ್ಯಗಳು ಕಾಳಸಂತೆಯಲ್ಲಿ ದುರ್ಬಳಕೆ ಅಗುತ್ತಿರುವ ವಿರುದ್ದ ಪುರಾವೆಗಳು ಸಿಕ್ಕಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.


























