Home ಜಿಲ್ಲೆ ಬೆಂಗಳೂರು ಮೆಡಿಕವರ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳ ಘಟಕ ಉದ್ಘಾಟನೆ

ಮೆಡಿಕವರ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳ ಘಟಕ ಉದ್ಘಾಟನೆ

ಕೆ.ಆರ್.ಪುರ, ಮೇ.೧೧- ತಾಯಂದಿರ ದಿನಾಚರಣೆಯಂದು ವೈಟ್ ಫೀಲ್ಡ್ ನ ಹೂಡಿಯ ಮೆಡಿಕವರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ ಮಹಿಳಾ ಮತ್ತು ಮಕ್ಕಳ ೧೦೦ ಹಾಸಿಗೆಗಳ ಘಟಕವನ್ನ ಖ್ಯಾತ ನಟಿ ರುಕ್ಮಿಣಿ ವಸಂತ ಅವರು ಉದ್ಘಾಟಿಸಿದರು.

ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ನಟಿ ರುಕ್ಮಿಣಿ ವಸಂತ, ತಾಯಿಯ ಪ್ರೀತಿ ಪ್ರತಿಯೊಂದು ಮನೆಯ ಹೃದಯ ಬಡಿತದಂತಿದೆ. ಆ ಹೃದಯವನ್ನು ಕಾಪಾಡುವ ಈ ರೀತಿಯ ಆಸ್ಪತ್ರೆಯನ್ನು ತಾಯಂದಿರ ದಿನದಂದು ನಮ್ಮ ನಗರದಲ್ಲಿ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ತಾಯಿ-ಮಗು ಆರೋಗ್ಯ ಸೇವೆಗಳಿಗೆ ಸಮಗ್ರ ಮತ್ತು ಉನ್ನತ ಮಟ್ಟದ ಚಿಕಿತ್ಸಾ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ.

ಆಸ್ಪತ್ರೆ ಉದ್ಘಾಟನೆಯ ಹಿನ್ನಲೆ ತಾಯಂದಿರಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ಸೀಮಿತ ಉದ್ಘಾಟನಾ ಕೊಡುಗೆಯ ಭಾಗವಾಗಿ, ಮೊದಲ ೧೦೦ ನೋಂದಣಿದಾರರು ಸಾಮಾನ್ಯ ಹೆರಿಗೆಗೆ ?೪೫,೦೦೦ ಮತ್ತು ಕ್ಕೆ ಸಿ-ಸೆಕ್ಷನ್ ಗೆ ?೬೫,೦೦೦ ಪ್ಯಾಕೇಜ್‌ಗಳನ್ನು ಪಡೆಯಬಹುದು. ತಜ್ಞ ಪ್ರಸೂತಿ ಆರೈಕೆ, ಸುಧಾರಿತ ಸೌಲಭ್ಯಗಳು, ನವಜಾತ ಶಿಶುಗಳ ಬೆಂಬಲ ಮತ್ತು ಸಹಾನುಭೂತಿಯ ಆರೈಕೆ ಸೇವೆಗಳೊಂದಿಗೆ ವಿಶೇಷ ಕೊಡುಗೆಗಳನ್ನ ನೀಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ ಅನೀಲ್ ಕೃಷ್ಣ ಅವರು ತಾಯಂದಿರು ಮತ್ತು ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪುಗೊಂಡ ಆಸ್ಪತ್ರೆಯನ್ನು ನಗರಕ್ಕೆ ನೀಡುತ್ತಿರುವುದು ಸಂತೋಷದ ವಿಷಯ. ಗುಣಮಟ್ಟ, ಸುಲಭ ಲಭ್ಯತೆ ಮತ್ತು ವಿಶ್ವಾಸಾರ್ಹ ಚಿಕಿತ್ಸಾ ಫಲಿತಾಂಶಗಳಿಗೆ ನಾವು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿಶೇಷ ಆರೋಗ್ಯ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ಆಸ್ಪತ್ರೆ ಆ ಪ್ರದೇಶದ ಜನರಿಗೆ ದೀರ್ಘಕಾಲಿಕ ಆರೋಗ್ಯ ಸೇವಾ ಬದ್ಧತೆಯಾಗಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಪಿ ಹರಿಕೃಷ್ಣ,
ಡಾ.ಪ್ರವೀಣ್ ವೆಂಕಟಗಿರಿ, ಡಾ.ಲತೀಶ್ ಕಂಬಂ, ಡಾ.ಶಿವಶಂಕರ ಡಿಗ್ಗಿಕರ್, ಡಾ.ತೇಜಿ ದಾವಣೆ ಹಾಗೂ ಡಾ.ವೇಣುಗೋಪಾಲ್ ರೆಡ್ಡಿ ಇದ್ದರು.