Home ಜಿಲ್ಲೆ ಕಲಬುರಗಿ ಅ. 18ರಂದು ಐಕೆಎಫ್ ಸೀಸನ್ 6 ಅಂಡರ್-17 ಫುಟ್‍ಬಾಲ್ ಆಯ್ಕೆ ಪ್ರಕ್ರಿಯೆ

ಅ. 18ರಂದು ಐಕೆಎಫ್ ಸೀಸನ್ 6 ಅಂಡರ್-17 ಫುಟ್‍ಬಾಲ್ ಆಯ್ಕೆ ಪ್ರಕ್ರಿಯೆ

ಕಲಬುರಗಿ,ಅ.16: ನಗರದ ಯುವ ಕ್ರೀಡಾಪಟುಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿರುವ ಕೆಪಿಸಿಸಿ ಸದಸ್ಯ ಹಾಗೂ ಖಮರ್ ಉಲ್ ಇಸ್ಲಾಂ ಫೌಂಡೇಶನ್‍ನ ಅಧ್ಯಕ್ಷ ಫರಾಝ್ ಉಲ್ ಇಸ್ಲಾಂ ಅವರು, ಕಲಬುರಗಿಯಲ್ಲಿ ಅಕ್ಟೋಬರ್ 18, ರಂದು ಕೆಸಿಟಿ ಕಾಲೇಜಿನಲ್ಲಿ ಇಂಡಿಯಾ ಖೇಲೋ ಫುಟ್‍ಬಾಲ್ (ಐಕೆಎಫ್ ) ಸೀಸನ್ 6 ಅಂಡರ್-17 ಫುಟ್‍ಬಾಲ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು,ಫುಟ್‍ಬಾಲ್‍ನಲ್ಲಿ ಆಸಕ್ತಿ ಹೊಂದಿರುವ ಯುವಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಅವರು ಪೆÇ್ರೀತ್ಸಾಹಿಸಿದರು.
ಭಾರತದಲ್ಲಿ ಫುಟ್‍ಬಾಲ್ ಪ್ರತಿಭೆಗಳನ್ನು ಗುರುತಿಸಲು ಮತ್ತು ಯುವ ಆಟಗಾರರಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಇಂಡಿಯಾ ಖೇಲೋ ಫುಟ್‍ಬಾಲ್ ಪ್ರಮುಖ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯುವ ಆಟಗಾರರಿಗೆ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆಯಲಿದ್ದು, ಇದು ಅವರ ಕ್ರೀಡಾ ಭವಿಷ್ಯಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಕಲಬುರಗಿಯಲ್ಲಿ ಐಕೆಎಫ್ ಸಂಘಟನೆಯ ಸಂಪರ್ಕವನ್ನು ಕಲ್ಪಿಸುವ ಮೂಲಕ ಫುಟ್‍ಬಾಲ್ ಅಭಿವೃದ್ಧಿಗೆ ಸಹಕರಿಸಿರುವ ಗುಲ್ಬರ್ಗಾ ಇತ್ತೆಹಾದ್ ಫುಟ್‍ಬಾಲ್ ಅಕಾಡೆಮಿಯ ಕಾರ್ಯವನ್ನು ಅವರು ಅಭಿನಂದಿಸಿದರು.ಫುಟ್‍ಬಾಲ್ ಮಾತ್ರವಲ್ಲದೆ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಲ್ಲಿಯೂ ಆಸಕ್ತಿ ಹೊಂದಿರುವ ಯುವಕರನ್ನು ಪೆÇ್ರೀತ್ಸಾಹಿಸಲು ತಾವು ಸಿದ್ಧರಿರುವುದಾಗಿ ಅವರು ತಿಳಿಸಿದರು.