
ಹುಬ್ಬಳ್ಳಿ, ಮೇ13: ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘ ಶಿವಮೊಗ್ಗ ಧಾರವಾಡ ಜಿಲ್ಲಾ ಘಟಕ ಹಾಗೂ ಹುಬ್ಬಳ್ಳಿ ತಾಲೂಕಾ ಶಹರ ವ ಗ್ರಾಮೀಣ ಘಟಕದ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಅಲ್ ಹಾಜ್ ಎಚ್ ಇಬ್ರಾಹೀಂಮ ಸಾಹೇಬರ 95 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಮಾಜಿ ರಾಜ್ಯ ಘಟಕದ ಅಧ್ಯಕ್ಷರಾದ ಹಜರತ್ ಅಲಿ ದೂಡ್ಡಮನಿ, ಮಾಜಿ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಪಿ. ಬಿ. ನದಾಫ್, ರಾಜ್ಯ ಘಟಕದ ಉಪಾಧ್ಯಕ್ಷರಾದ ಎಮ್. ಎಚ್. ಬೆಂಡಿಗೇರಿ, ಧಾರವಾಡ ಜಿಲ್ಲಾ ಅಧ್ಯಕ್ಷ ಎಫ್. ಎಮ್. ನದಾಫ್, ಖ್ವಾಜಾಸಾಬ ನದಾಫ್, ದಾವಲಸಾಬ ನದಾಫ್, ಹುಬ್ಬಳ್ಳಿ ತಾಲೂಕು ಶಹರ ಅಧ್ಯಕ್ಷ ಖುದಾನಸಾಬ ಗೂಗ್ಗಲ್, ಹುಬ್ಬಳ್ಳಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಇಸ್ಮಾಯಿಲ್ ಸಾಬ್ ನದಾಫ್ ಮಾತನಾಡಿ, ಇಬ್ರಾಹೀಂ ಸಾಹೇಬರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.
ಈ ಸಂದರ್ಭದಲ್ಲಿ ಎನ್. ಎಸ್. ನದಾಫ್, ದಿವಾನಸಾಬ ನದಾಫ್, ರಫೀಕ್ ಅಹ್ಮದ್ ದೊಡ್ಡಮನಿ, ರಿಯಾಜ್ ಅಹ್ಮದ ಕೆ ನದಾಫ್, ಖಾದರ್ ಬಾಷಾ ಶಿಬಾರಗಟ್ಟಿ, ಹಜರತ್ ಅಲಿ ನದಾಫ್, ನಜಿರಸಾಬ ಕುಂದಗೋಳ, ಹಸನಸಾಬ ನದಾಫ್, ಎಮ್ ಕೆ ನದಾಫ್, ಖಲಂದರ ಜಿಗಳೂರ, ಮಲಂಗಸಾಬ ನದಾಫ್, ಖಾದರಸಾಬ ನದಾಫ್, ಬಾಲೆಸಾಬ ಪಿಂಜಾರ, ಮಹಬೂಬಸಾಬ ನದಾಫ್,ಹನಿಫ್ ನದಾಫ್,ಮೌಲಾಸಾಬ ನದಾಫ್, ಎಚ್ ಎಫ್ ಬೆಟಗೇರಿ, ಹಾಗೂ ಆರ್ ವಾಯ್ ನದಾಫ್ ಪಾಲ್ಗೊಂಡಿದ್ದರು.
ತಾಲೂಕು ಕಾರ್ಯದರ್ಶಿ ಅಬ್ದುಲ್ ನಬಿ ನದಾಫ್ ವಂದಿಸಿದರು.























