Home ಜಿಲ್ಲೆ ಕಲ್ಯಾಣ ಕರ್ನಾಟಕದ ಕುರುಬ ಸಮುದಾಯದ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡಿ

ಕಲ್ಯಾಣ ಕರ್ನಾಟಕದ ಕುರುಬ ಸಮುದಾಯದ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡಿ

ಬಳ್ಳಾರಿಯವರಿಗೆ ಎಂಎಲ್ ಸಿ ನೀಡಿ.

ಬುಡಾ ಅಧ್ಯಕ್ಷ ನೀಡಿ.

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.28: ಕಲ್ಯಾಣ ಕರ್ನಾಟಕದ ಕುರುಬ ಸಮುದಾಯದವರಾದ ಕೊಪ್ಪಳದಲ್ಲಿ ಮೂರನೇ ಬಾರಿ ಶಾಸಕರಾಗಿರುವ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡಿ ಎಂದು ಬಳ್ಳಾರಿ ಜಿಲ್ಲಾ ಕುರುಬ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ಹೈ ಕಮಾಂಡಿಗೆ ಒತ್ತಾಯಿಸಿದ್ದಾರೆ.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಗಾದಿಲಿಂಗನಗೌಡ, ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ನಾವು ಶೇ 90 ರಷ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೂ. ನಮ್ಮ ಸಮಜಾಕ್ಕೆ ನ್ಯಾಯಯುತವಾದ ಸ್ಥಾನಮಾನ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಡಿಸಿಸಿ ಅಧ್ಯಕ್ಷರಾಗಿಲ್ಲ. ಜಿಪಂ ಅಧ್ಯಕ್ಷರಾಗಿಲ್ಲ. ಆದರೂ ಈವರೆಗೆ ಸುಮನಿರುವುದು ಏಕೆಂದರೆ, ನಮ್ಮಸಮಾಜದವರೇ ಸಿಎಂ ಇದ್ದಾರೆಂಬ ಕಾರಣಕ್ಕೆ. ನೀಡುತ್ತಿಲ್ಲ.

ಈ ಹಿಂದೆ ಬಳ್ಳಾರಿ ಜಿಲ್ಲೆಯಿಂದ ಹಡಗಲಿಯ

ಈ.ಟಿ.ಶಂಬುನಾಥ ಅವರಿಗೆ ಟಿಕಿಟ್ ನೀಡಿ, ಸಚಿವ ಸ್ಥಾನ ನೀಡಿದ್ದು ಬಿಟ್ಟರೆ ನಂತರ ನಮಗೆ ಟಿಕೆಟ್ ನೀಡಿಲ್ಲ.

ಈಗ ನಮ್ಮಬೇಡಿಕೆ ಎಂದರೆ ಕಲ್ಯಾಣ ಕರ್ನಾಟಕದ ಭಾಗಕ್ಕೆ ಒತ್ತು ನೀಡಿ. ಸಂಪುಟ ಪುನರ್ ರಚನೆ ಆದರೆ ನಮ್ಮ ಸಮಾಜದವರಾದ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಒಂದು ಎಂಎಲ್ ಸಿ ಸ್ಥಾನವನ್ನು ನಮ್ಮ ಸಮಾಜದವರಿಗೆ ನೀಡಬೇಕು. ಜೊತೆಗೆ ನಿಗಮ ಮಂಡಳಿಯಲ್ಲೂ ಪಕ್ಷದಲ್ಲಿ ಸಕ್ರೀಯವಾಗಿರುವವ ಇಬ್ಬರಿಗೆ ನೀಡಿ.. ಅದರಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ನೀಡಿ ಬೇಕೆಂದರು.

ಸುದ್ದಿಗೋಷ್ಟಿಯಲ್ಲಿ ಬೆಣಕಲ್ ಬಸವರಾಜ್ ಗೌಡ, ಬಿ.ಕೆ.ಕೆರಕೋಡಪ್ಪ, ದಮ್ಮೂರು ಸೋಮಪ್ಪ, ಕೆ.ಹೊನ್ನಪ್ಪ, ಗಾದಿಲಿಂಗನಗೌಡ, ಚನ್ನಬಸವರಾಜ್, ಕುಡುತಿನಿ ರಾಮಾಂಜನೇಯ, ಉಮಾಪತಿ, ಓಂಕಾರಪ್ಪ, ಗುರುಪಾದ ಮೊದಲಾದವರು ಇದ್ದರು.