
ಗುರುಮಠಕಲ್: ಮೇ.೧೧:ಸಮಿಪದ ಮೋತಕಪಲ್ಲಿ ಗ್ರಾಮದಲ್ಲಿ ಮೋತಕಪಲ್ಲಿ ರೆಡ್ಡಿ ಸಮಾಜದ ಬಾಂಧವರ ಸಮ್ಮುಖದಲ್ಲಿ ಶ್ರೀ ಶ್ರೀ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ೬೦೪ನೇ ಜಯಂತಿಯನ್ನು ಆಚರಿಸಲಾಯಿತು..
ಈ ಸಂದರ್ಭದಲ್ಲಿ ಮೋತಕಪಲ್ಲಿ ಗ್ರಾಮದ ರೆಡ್ಡಿ ಸಮಾಜದ ಬಾಂಧವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸರೆಡ್ಡಿ ಚಂಡ್ರಿಕಿ ಅವರು ಸ್ವಾಗತಿಸಿ, ವಂದಿಸಿದರು. ಈ ವೇಳೆ ಮುಖಂಡರಾದ
ವೆಂಕಟರಾಮರೆಡ್ಡಿ ಮಾಲಿ ಪಾಟೀಲ್ .ಅವರು ವಿಶೇಷ ಉಪನ್ಯಾಸ ನೀಡಿದರು.
ಗ್ರಾಮದ ಹಿರಿಯರಾದ ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ್, ನಾರಾಯಣ ರೆಡ್ಡಿ ಮಾಲಿ ಪಾಟೀಲ್, ವೆಂಕಟರೆಡ್ಡಿ, ನರಸಿಂಹ ರೆಡ್ಡಿ , ವಿಶ್ವನಾಥ ರೆಡ್ಡಿ,ಜನಾರ್ಧನ ರೆಡ್ಡಿ ,ನರಸರೆಡ್ಡಿ, ಭೀಮರೆಡ್ಡಿ, ಸುದರ್ಶನ್ ರೆಡ್ಡಿ, ರಾಮಕೃಷ್ಣ ರೆಡ್ಡಿ, ಇತರರು ಉಪಸ್ಥಿತರಿದ್ದರು.























